ನವದೆಹಲಿ: ಪ್ರಸ್ತೂತ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ನಲ್ಲಿ ಉತ್ತಮ ಪ್ರದರ್ಶ ನೀಡುತ್ತಿರುವ ಟೀಮ್ ಇಂಡಿಯಾ ಸ್ಪಿನ್ ಬೌಲಿಂಗ್ ಆಲ್ರೌಂಡರ್ ರವೀಂದ್ರ ಜಡೇಜಾ, ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಹಾಗೂ ಮುರಳಿ ವಿಜಯ್ ಅವರಿಗೆ ಬಿಸಿಸಿಐ ಎ ದರ್ಜೆಗೆ ಬಡ್ತಿ ನೀಡಿದ್ದು, ಇದರೊಂದಿಗೆ ಅವರ ಸಂಭಾವನೆಯೂ ಡಬಲ್ ಆಗಿದೆ.
ಕ್ರಿಕೆಟ್ ಆಟಗಾರರ ವಾರ್ಷಿಕ ಒಪ್ಪಂದ ನಿರ್ಧರಿಸಲು ಬಿಸಿಸಿಐನ ಆಡಳಿತಾಗರರ ಸಮಿತಿ ಇಂದು ಬೆಳಗ್ಗೆ ಸಭೆ ಸೇರಿ, ಎಲ್ಲಾ ವರ್ಗದ ಆಟಗಾರರ ವಾರ್ಷಿಕ ಸಂಭಾವನೆಯನ್ನು ಮಾಡಿದೆ.
ಎ ದರ್ಜೆಯ ಆಟಗಾರರಿಗೆ ವಾರ್ಷಿಕ 2 ಕೋಟಿ, ಬಿ ದರ್ಜೆ ಆಟಗಾರರಿಗೆ ವಾರ್ಷಿಕ 1 ಕೋಟಿ ಹಾಗೂ ಸಿ ದರ್ಜೆ ಆಟಗಾರರಿಗೆ ವಾರ್ಷಿಕ 50 ಲಕ್ಷ ರುಪಾಯಿ ನೀಡಲು ನಿರ್ಧರಿಸಲಾಗಿದೆ.
ಮಹೇಂದ್ರ ಸಿಂಗ್ ಧೋನಿ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪುಜಾರ, ಅಜಿಂಕ್ಯಾ ರಹನೆ, ರವಿಂದ್ರನ್ ಅಶ್ವಿನ್, ಜಡೇಜಾ ಹಾಗೂ ಮುರಳಿ ವಿಜಯ್ ಎ ದರ್ಜೆಯ ಆಟಗಾರರಾಗಿದ್ದಾರೆ.
ರಾಂಚಿ ಪಂದ್ಯದ ಎರಡೂ ಇನಿಂಗ್ಸ್ ಸೇರಿ 179ರನ್ಗೆ 9ವಿಕೆಟ್ ಕಬಳಿಸಿ ಜಡೇಜಾ ಬೌಲಿಂಗ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಪಡೆದರೆ, ಅಮೋಘ 202 ರನ್ ಸಿಡಿಸಿ ಪಂದ್ಯಶ್ರೇಷ್ಠರಾಗಿದ್ದ ಚೇತೇಶ್ವರ ಪೂಜಾರ(861) ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಜೀವನಶ್ರೇಷ್ಠ 2ನೇ ರ್ಯಾಂಕ್ಗೆ ಏರಿದ್ದರು.