ಡೇವಿಡ್ ವಾರ್ನರ್ ವಿಕೆಟ್ ಕೀಳಲು ಕುಲ್ದೀಪ್ ಗೆ ನೆರವಾಗಿದ್ದು ಶೇನ್ ವಾರ್ನ್ ಸಲಹೆ

ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಟೀಂ ಇಂಡಿಯಾ ಏಡಗೈ ಸ್ಪಿನ್ನರ್ ಕುಲ್ದೀಪ್ ಯಾದವ್ ಚೊಚ್ಚಲ ವಿಕೆಟ್ ಪಡೆದಿದ್ದು ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟ್ಸ್...
ಕುಲದೀಪ್ ಯಾದವ್
ಕುಲದೀಪ್ ಯಾದವ್
Updated on: 
ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಟೀಂ ಇಂಡಿಯಾ ಏಡಗೈ ಸ್ಪಿನ್ನರ್ ಕುಲ್ದೀಪ್ ಯಾದವ್ ಚೊಚ್ಚಲ ವಿಕೆಟ್ ಪಡೆದಿದ್ದು ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಅವರದ್ದು, ಈ ವಿಕೆಟ್ ಕೀಳಲು ಕುಲ್ದೀಪ್ ಗೆ ನೆರವಾಗಿದ್ದು ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಸಲಹೆ. 
ಹೌದು! ಈಗಂತ ಕುಲ್ದೀಪ್ ನಾಯರ್ ಪಂದ್ಯದ ಮೊದಲ ದಿನದಾಟದ ಬಳಿಕ ಸ್ಮರಿಸಿಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಕುಲ್ದೀಪ್ ಪಡೆದಿದ್ದು ಬರೋಬ್ಬರಿ ನಾಲ್ಕು ವಿಕೆಟ್. ಮೊದಲ ಪಂದ್ಯದಲ್ಲೇ 4 ವಿಕೆಟ್ ಕಿತ್ತ ಭಾರತದ ಮೊದಲ ಎಡಗೈ ಲೆಗ್ ಸ್ಪಿನ್ನರ್ ಎಂಬ ಖ್ಯಾತಿ ಗಳಿಸಿದ್ದಾರೆ. 
ಇದು ಪುಣೆ ಟೆಸ್ಟ್ ಆರಂಭಕ್ಕೂ ಮೊದಲು ನಡೆದ ಘಟನೆ. ಆಗ ಕುಲದೀಪ್ ಅವರನ್ನು ತಂಡದ ಕೋಚ್ ಅನಿಲ್ ಕುಂಬ್ಳೆ ಮತ್ತೊಬ್ಬ ಶೇನ್ ವಾರ್ನ್ ಬಳಿ ಕರೆದುಕೊಂಡು ಹೋಗಿದ್ದರು. ಆಗ ವಾರ್ನ್ ಕುಲದೀಪ್ ಗೆ ಉಪಯುಕ್ತ ಸಲಹೆ ನೀಡಿದ್ದರು. ಈ ಸಲಹೆಗಳು ಹೆಚ್ಚು ಉಪಯುಕ್ತವಾದವಂತೆ. 
ವಾರ್ನರ್ ವಿಕೆಟ್ ಪಡೆದ ಎಸೆತ ಚೈನಾಮನ್ ಆಗಿರಲಿಲ್ಲ. ಅದೊಂದು ಫ್ಲಿಪರ್ ಆಗಿತ್ತು. ಇದನ್ನು ನಾನು ವಾರ್ನ್ ಅವರಿಂದ ಕಲಿತಿದ್ದೆ. ಇದನ್ನು ಅವರದೇ ನಾಡಿನ ವಾರ್ನರ್ ವಿಕೆಟ್ ಕೀಳಲು ನೆರವಿಗೆ ಬಂತು ಎಂದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com