ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್ ಆಗಬೇಕು: ರಿಕಿ ಪಾಂಟಿಂಗ್

ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಸದ್ಯ ಭಾರತ 19 ವರ್ಷದೊಳಗಿನವರ ಹಾಗೂ 'ಎ' ತಂಡದ ಕೋಚ್ ಆಗಿದ್ದು ಅವರೇ ಟೀಂ ಇಂಡಿಯಾದ ಕೋಚ್ ಆಗಬೇಕು ಎಂದು...
ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್
Updated on: 
ಸಿಡ್ನಿ: ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಸದ್ಯ ಭಾರತ 19 ವರ್ಷದೊಳಗಿನವರ ಹಾಗೂ 'ಎ' ತಂಡದ ಕೋಚ್ ಆಗಿದ್ದು ಅವರೇ ಟೀಂ ಇಂಡಿಯಾದ ಕೋಚ್ ಆಗಬೇಕು ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ. 
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಭಾರತೀಯ ಕೋಚ್ ನ ಅಗತ್ಯವಿದೆಯೋ ಅಥವಾ ವಿದೇಶಿ ಕೋಚ್ ಗಳ ನೇಮಕಕ್ಕೆ ಎದುರು ನೋಡುತ್ತಿದೆಯೋ ಗೊತ್ತಿಲ್ಲ. ಆದರೆ ರಾಹುಲ್ ದ್ರಾವಿಡ್ ಗಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ ಎಂದು ನನಗನಿಸುತ್ತದೆ ಎಂದು ಪಾಂಟಿಂಗ್ ಹೇಳಿದ್ದಾರೆ. 
ರಾಹುಲ್ ದ್ರಾವಿಡ್ ಗೆ ಎಲ್ಲಾ ಮೂರು ಮಾದರಿಯ ಆಟಕ್ಕೆ ಬೇಕಿರುವ ಜ್ಞಾನವಿದ್ದು, ಯುವ ಆಟಗಾರರನ್ನು ಕಡಿಮೆ ಸಮಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಸಿದ್ಧಪಡಿಸುವ ಕಲೆಯನ್ನು ನಾನು ಅವರಲ್ಲಿ ಮಾತ್ರ ನೋಡಿದ್ದೇನೆ. ಐಪಿಎಲ್ ನಲ್ಲೂ ಕಾರ್ಯನಿರ್ವಹಿಸಿರುವುದರಿಂದ ಅವರಿಗೆ ಎಲ್ಲಾ ಆಟಗಾರರ ಬಗ್ಗೆಯೂ ಮಾಹಿತಿ ಇರಲಿದೆ ಎಂದರು.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com