ಬಾರ್‍ಗೆ ತನ್ನ ಹೆಸರು ಬಳಕೆ: ನ್ಯಾಯಾಲಯ ಮೆಟ್ಟಿಲೇರಿದ ಗಂಭೀರ್

ತನ್ನ ಹೆಸರನ್ನು ಬಳಸಿಕೊಂಡು ಬಾರ್ ಮಾಲೀಕರೊಬ್ಬರು ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಟೀಂ ಇಂಡಿಯಾದ ಆಟಗಾರ ಗೌತಮ್ ಗಂಭೀರ್...
ಗೌತಮ್ ಗಂಭೀರ್
ಗೌತಮ್ ಗಂಭೀರ್
ನವದೆಹಲಿ: ತನ್ನ ಹೆಸರನ್ನು ಬಳಸಿಕೊಂಡು ಬಾರ್ ಮಾಲೀಕರೊಬ್ಬರು ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಟೀಂ ಇಂಡಿಯಾದ ಆಟಗಾರ ಗೌತಮ್ ಗಂಭೀರ್ ಕೋರ್ಟ್ ಮೆಟ್ಟಿಲೇರಿದ್ದಾರೆ. 
ಬಾರ್ ಗೆ ಗೌತಮ್ ಗಂಭೀರ್ ಎಂದು ಟ್ಯಾಗ್ ಲೈನ್ ಬಳಕೆ ಮಾಡಿಕೊಳ್ಳಲಾಗುತ್ತಿದೆ. ನನ್ನ ಹೆಸರನ್ನು ಬಳಿಸಿಕೊಂಡು ಮದ್ಯ ಮಾರಾಟಕ್ಕೆ ಪ್ರಚೋದನೆ ನೀಡಿದಂತೆ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ನ್ಯಾಯಾಲಯವನ್ನು ಕೋರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೋರ್ಟ್ ಬಾರ್ ಮಾಲೀಕರಿಗೆ ನೋಟಿಸ್ ನೀಡಿದೆ. 
ಇನ್ನು ಪಂಜಾಬ್ ಮೂಲದ ಬಾರ್ ನ ಮಾಲೀಕನ ಹೆಸರು ಸಹ ಗೌತಮ್ ಗಂಭೀರ್ ಎಂದಾಗಿದ್ದು ನನ್ನ ಹೆಸರಲ್ಲಿ ಬಾರ್ ನಡೆಸುತ್ತಿರುವುದಾಗಿ ಬಾರ್ ಮಾಲೀಕ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com