ಹಾರ್ದಿಕ್ ಪಾಂಡ್ಯರಿಂದ ಅದ್ಭುತ ಡೈವ್ ಕ್ಯಾಚ್

ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಡೈವ್ ಹೊಡೆಯುವ ಮೂಲಕ ಅಮೋಘ ಕ್ಯಾಚ್ ಹಿಡಿದಿದ್ದಾರೆ...
ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ
Updated on
ನವದೆಹಲಿ: ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಡೈವ್ ಹೊಡೆಯುವ ಮೂಲಕ ಅಮೋಘ ಕ್ಯಾಚ್ ಹಿಡಿದಿದ್ದಾರೆ. 
ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ 203 ರನ್ ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಗೆ ಎರಡನೇ ಓವರ್ ನಲ್ಲಿ ಮೊದಲ ಆಘಾತ ಎದುರಾಯಿತು. ಪಂದ್ಯದ ಎರಡನೇ ಓವರ್ ಮಾಡಿದ ಯಜುವೇಂದ್ರ ಚಹಲ್ ಎಸೆತವನ್ನು ಮಾರ್ಟಿನ್ ಗುಪ್ಟಿಲ್ ಬಾರಿಸಿದರು. ಬಾಲ್ ಇನ್ನೇನು ಬೌಂಡರಿಗೆ ತಲುಪಬೇಕು ಎನ್ನುವಷ್ಟರಲ್ಲಿ ಹಾರ್ದಿಕ್ ಪಾಂಡ್ಯ ಸೂಪರ್ ಡೈವ್ ಹೊಡೆದು ಕ್ಯಾಚ್ ಹಿಡಿದರು. 
ಹಾರ್ದಿಕ್ ಪಾಂಡ್ಯರ ಈ ಅದ್ಭುತ ಡೈವ್ ಕ್ಯಾಚ್ ಅನ್ನು ಕಂಡು ಪ್ರೇಕ್ಷಕರಿಂದ ಚಪ್ಪಾಳೆ ಸಿಡಿಸಿದರು. ಹಾರ್ದಿಕ್ ಪಾಂಡ್ಯರ ಈ ಡೈವ್ ಕ್ಯಾಚ್ ವಿಡಿಯೋ ವೈರಲ್ ಆಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com