ನವದೆಹಲಿ: ಪ್ರವಾಸಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಟೀಂ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದೆ.
ಹಾರ್ದಿಕ್ ಪಾಂಡ್ಯ ತಂಡದಲ್ಲಿ ಬ್ಯಾಕ್ ಟು ಬ್ಯಾಕ್ ಸರಣಿಗಳಲ್ಲಿ ಆಡುತ್ತಿದ್ದು ಎಲ್ಲಿ ಅವರು ಗಂಭೀರ ಗಾಯಗಳಿಗೆ ಒಳಗಾಗುತ್ತಾರೋ ಎಂಬ ಆತಂಕದಿಂದ ಆಯ್ಕೆ ಸಮಿತಿ ಹಾರ್ದಿಕ್ ಪಾಂಡ್ಯರನ್ನು ಲಂಕಾ
ವಿರುದ್ಧದ ಸರಣಿಯಿಂದ ಹೊರಗಿಟ್ಟಿದ್ದು ಲಂಕಾ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಟೀಂ ಇಂಡಿಯಾ ತಂಡವನ್ನು ಆಯ್ಕೆ ಮಾಡಿದೆ.