ಕೋಲ್ಕತ್ತಾ ಟೆಸ್ಟ್ ನಲ್ಲಿ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 50ನೇ ಶತಕ ದಾಖಲಿಸಿದ್ದಾರೆ. ವಿರಾಟ್ ಕೊಹ್ಲಿ ಶತಕಕ್ಕೂ ಮುನ್ನ ಅಂದರೆ 97 ರನ್ ಗಳಿಸಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳಬೇಕೆ ಎಂದು ಕೋಚ್ ರವಿಶಾಸ್ತ್ರಿಯನ್ನು ಕೇಳಿದರಂತೆ. ಆದರೆ ಅದಕ್ಕೆ ಶಾಸ್ತ್ರಿ ಬ್ಯಾಟಿಂಗ್ ಮುಂದುವರಿಸಿ ಶತಕ ಪೂರೈಸುವಂತೆ ಸೂಚಿಸಿದ್ದರು. ಜತೆಗೆ 12ನೇ ಆಟಗಾರನ ಬಳಿ ಸಂದೇಶ ಕಳುಹಿಸಿದರು.