ನಿನ್ನೆ ಗುವಾಹತಿಯ ಬರ್ಸಾಪರಾದಲ್ಲಿ ನಿನ್ನೆ ರಾತ್ರಿ ಆಸ್ಟ್ರೇಲಿಯಾ ಟೀಂ ಪ್ರಯಾಣಿಸುತ್ತಿದ್ದ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇದರಿಂದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರು ಬೆಚ್ಚಿಬಿದ್ದಿದ್ದು, ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಿಂದ ಹೋಟೆಲ್‌ಗೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಬಸ್ ಮೇಲೆ ಕಲ್ಲು ತೂರಿದ್ದಾರೆ.
ಕಲ್ಲು ತೂರಾಟದ ಪರಿಣಾಮ ಬಸ್‌ನ ಕಿಟಕಿ ಗ್ಲಾಸುಗಳು ಪುಡಿಪುಡಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಆಟಗಾರನಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ. ಘಟನೆ ಬಳಿಕ ಟ್ವೀಟ್ ಮಾಡಿರುವ ಆಸಿಸ್ ತಂಡದ ಆಟಗಾರ ಆ್ಯರಾನ್ ಫಿಂಚ್, " ಈ ಘಟನೆಯಿಂದ ತುಂಬಾ ಆತಂಕವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
2ನೇ ಬಾರಿಗೆ ಆಸಿಸ್ ತಂಡಡ ಆಟಗಾರರ ಮೇಲೆ ಕಲ್ಲು ತೂರಾಟ
ಇನ್ನು ಕಳೆದ ತಿಂಗಳು ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದ ವೇಳೆಯಲ್ಲೂ ಆಸಿಸ್ ಆಟಗಾರರಿಗೆ ಇಂತಹುದೇ ಭಯಾನಕ ಅನುಭವಾಗಿತ್ತು. ಚಿತ್ತಗಾಂಗ್ ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾ ತಂಡ ಹೊಟೆಲ್ ಗೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು.
ಘಟನೆ ಕುರಿತಂತೆ ಆಸ್ಟ್ರೇಲಿಯಾ ತಂಡಕ್ಕೆ ನೀಡಲಾಗಿರುವ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.