ಇತ್ತೀಚೆಗಷ್ಟೇ ಬಾಲಿವುಡ್ ನಟ ಆಮೀರ್ ಖಾನ್ ನಡೆಸಿದ ಸಂದರ್ಶನದಲ್ಲಿ ಮೊಹಮ್ಮದ್ ಆಮೀರ್ ತಾವು ಎದುರಿಸಿದರ ಪೈಕಿ ಅತ್ಯಂತ ಕಠಿಣ ಬೌಲರ್ ಎಂದು ಕೋಹ್ಲಿ ಹೊಗಳಿಕೆಯ ಮಾತುಗಳನ್ನಾಡಿದ್ದರು. ಇದಕ್ಕೆ ವೆಬ್ ಸೈಟ್ ಗೆ ಪ್ರತಿಕ್ರಿಯೆ ನೀಡಿರುವ ಮಹಮದ್ ಆಮೀರ್, "ಕೋಹ್ಲಿ ಪ್ರಶಂಸೆಯಿಂದ ಅತ್ಯಂತ ಖುಷಿಯಾಗುತ್ತಿದೆ. ಕೋಹ್ಲಿ ಶ್ರೇಷ್ಠ ಕ್ರಿಕೆಟಿಗ ಎಂಬುದು ಜಗತ್ತಿಗೆ ಗೊತ್ತು. ಅವರ ವಿರುದ್ಧ ನಿಮ್ಮ ಸರ್ವಶ್ರೇಷ್ಠ ಪ್ರದರ್ಶನ ನೀಡಬೇಕಾಗುತ್ತದೆ. ಅವರಿಗೆ ಒಂದು ಅವಕಾಶವನ್ನು ನೀಡಿದರೂ ತಕ್ಷಣವೇ ಪಂದ್ಯವನ್ನು ನಿಮ್ಮಿಂದ ಕಸಿದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.