ಟೀಂ ಇಂಡಿಯಾ ಆಟಗಾರಿಗೆ ಗಂಟೆಗೆ 135 ಕಿ.ಮೀ ವೇಗದಲ್ಲಿ ಬೌಲ್ ಮಾಡಿದ ಅರ್ಜುನ್!

ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ತಾವೂ ಕೂಡ ಪ್ರತಿಭಾನ್ವಿತ ಆಟಗಾರ ಎಂಬುದನ್ನು ಸಾಬೀತು ಮಾಡುವ ತವಕದಲ್ಲಿದ್ದು, ಟೀಂ ಇಂಡಿಯಾ ಆಟಗಾರರಿಗೆ ಬೌಲ್ ಮಾಡುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶನ ಮಾಡಿದ್ದಾರೆ.
ಅರ್ಜುನ್ ತೆಂಡೂಲ್ಕರ್ ಬೌಲಿಂಗ್ ವೈಖರಿ
ಅರ್ಜುನ್ ತೆಂಡೂಲ್ಕರ್ ಬೌಲಿಂಗ್ ವೈಖರಿ
Updated on: 
ಮುಂಬೈ: ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ತಾವೂ ಕೂಡ ಪ್ರತಿಭಾನ್ವಿತ ಆಟಗಾರ ಎಂಬುದನ್ನು ಸಾಬೀತು ಮಾಡುವ ತವಕದಲ್ಲಿದ್ದು, ಟೀಂ ಇಂಡಿಯಾ ಆಟಗಾರರಿಗೆ  ಬೌಲ್ ಮಾಡುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶನ ಮಾಡಿದ್ದಾರೆ.
ನಾಳೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯ ಆರಂಭವಾಗಿಲಿದ್ದು, ಇದರ ಪೂರ್ವಭಾವಿಯಾಗಿ ನಿನ್ನೆ ನಡೆದ ಅಭ್ಯಾಸದಲ್ಲಿ ಟೀಂ ಇಂಡಿಯಾ ಆಟಗಾರರೊಂದಿಗೆ  ಅರ್ಜುನ್ ತೆಂಡೂಲ್ಕರ್ ಕೂಡ ನೆಟ್ಸ್ ನಲ್ಲಿ ಪಾಲ್ಗೊಂಡರು. ಈ ವೇಳೆ ಟೀಂ ಇಂಡಿಯಾ ಆಟಗಾರರಿಗೆ ಬೌಲ್ ಮಾಡಿದ ಅರ್ಜುನ್ ನಿಜಕ್ಕೂ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದರು. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ  ಸೇರಿದಂತೆ ಪ್ರಮುಖ ಆಟಗಾರಿಗೆ ಬೌಲ್ ಮಾಡಿದ ಅರ್ಜುನ್ ಕೋಚ್ ರವಿಶಾಸ್ತ್ರಿ ಅವರ ಗಮನ ಸೆಳೆಯುವಲ್ಲಿ ಸಫಲರಾದರು. 
ಪ್ರಸ್ತುತ ಅಂಡರ್ 19 ತಂಡದಲ್ಲಿ ಆಡುತ್ತಿರುವ ಅರ್ಜುನ್ ನೆಟ್ಸ್ ನಲ್ಲಿ ಆಟಗಾರರಿಗೆ ಬರೊಬ್ಬರಿ 130 ರಿಂದ 135 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡಿದ್ದಾರೆ. ಆ ಮೂಲಕ ತಾವು ಉತ್ತಮ ಬೌಲರ್ ಎಂಬ ಸಂದೇಶವನ್ನು  ರವಾನಿಸಿದ್ದಾರೆ. ಈ ಕುರಿತು ಭಾರತೀಯ ಕ್ರಿಕೆಟ್‌ ಮಂಡಳಿ ಅಧಿಕೃತವಾಗಿ ತನ್ನ ಟ್ವಿಟರ್‌ ಖಾತೆಯಲ್ಲಿ ಅರ್ಜುನ್‌ ಕೊಹ್ಲಿ ಸೇರಿದಂತೆ ಇತರೆ ಭಾರತೀಯ ಕ್ರಿಕೆಟ್‌ ಆಟಗಾರರಿಗೆ ಬೌಲಿಂಗ್‌ ಮಾಡುತ್ತಿರುವ ಫೋಟೊಗಳನ್ನು ಶೇರ್‌  ಮಾಡಿದೆ.
ಇನ್ನು ಅಂಡರ್ 19 ತಂಡದಲ್ಲಿ ಆಡುತ್ತಿರುವ ಅರ್ಜುನ್ ನ್ಯೂಜಿಲೆಂಡ್ ವಿರುದ್ಧ 3 ಏಕದಿನ ಮತ್ತು ಹಲವು ಟಿ20 ಪಂದ್ಯಗಳನ್ನು ಆಡಿದ್ದಾರೆ. ಬಾಂಗ್ಲಾದೇಶದ ವಿರುದ್ಧದ ಪಂದ್ಯಗಳಲ್ಲೂ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com