ಮೂರು ಮಾದರಿಯ ಕ್ರಿಕೆಟ್ ನಲ್ಲಿ ಲಂಕಾ 'ವೈಟ್ ವಾಶ್': ವಿಶ್ವ ದಾಖಲೆ ಬರೆದ ಟೀಂ ಇಂಡಿಯಾ

ಪ್ರವಾಸ ಕೈಗೊಂಡ ದೇಶದ ವಿರುದ್ಧ ಎಲ್ಲ ಬಗೆಯ ಸರಣಿಗಳ ಎಲ್ಲ ಪಂದ್ಯಗಳನ್ನು ಗೆದ್ದು ಟೂರ್ ವಾಶ್ ಮಾಡಿದ ವಿಶ್ವದ ಏಕೈಕ ತಂಡ ಎಂಬ ಖ್ಯಾತಿಗೆ ಭಾರತ ಭಾಜನವಾಗಿದೆ.
ಕಪ್ ಗೆದ್ದ ಭಾರತ ತಂಡ
ಕಪ್ ಗೆದ್ದ ಭಾರತ ತಂಡ
Updated on: 
ಕೊಲಂಬೋ: ಶ್ರೀಲಂಕಾ ವಿರುದ್ಧದ ಎಲ್ಲ ಬಗೆಯ ಸರಣಿಗಳಲ್ಲೂ ಅಮೋಘ ಪ್ರದರ್ಶನ ನೀಡಿದ್ದ ಭಾರತ ನೂತನ ವಿಶ್ವದಾಖಲೆಯೊಂದನ್ನು ನಿರ್ಮಿಸಿತ್ತು. ಪ್ರವಾಸ ಕೈಗೊಂಡ ದೇಶದ ವಿರುದ್ಧ ಎಲ್ಲ ಬಗೆಯ ಸರಣಿಗಳ ಎಲ್ಲ ಪಂದ್ಯಗಳನ್ನು ಗೆದ್ದು ಟೂರ್ ವಾಶ್ ಮಾಡಿದ ವಿಶ್ವದ ಏಕೈಕ ತಂಡ ಎಂಬ ಖ್ಯಾತಿಗೆ ಭಾರತ ಭಾಜನವಾಗಿದೆ.
ಕಳೆದ ಜುಲೈ 26ರಂದು ಆರಂಭವಾಗಿದ್ದ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 3-0 ಅಂತರದಲ್ಲಿ ಗೆದ್ದುಕೊಂಡಿತ್ತು. ಇದರ ಬೆನ್ನಲ್ಲೇ ನಡೆದ ಮೈಕ್ರೋ ಮ್ಯಾಕ್ಸ್ ಕಪ್ ಏಕದಿನ ಟೂರ್ನಿಯನ್ನು ಭಾರತ 5-0 ಅಂತರದಲ್ಲಿ ಜಯಿಸಿತ್ತು. ಇದೀಗ ಇಂದು ನಡೆದ ಏಕೈಕ ಟಿ20 ಪಂದ್ಯವನ್ನೂ ಜಯಿಸುವ ಮೂಲಕ ಭಾರತ ಕ್ರಿಕೆಟ್ ಇತಿಹಾಸದಲ್ಲೇ ತವರು ತಂಡದ ವಿರುದ್ಧ ಟೂರ್ ವಾಶ್ ಮಾಡಿದ ಮೊದಲ ದೇಶವಾಗಿ ಹೊರಹೊಮ್ಮಿದೆ.
ಈ ಹಿಂದೆ ಬಲಾಢ್ಯ ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆದಿದ್ದ 3 ಪಂದ್ಯಗಳ ಟಿ20 ಸರಣಿಯನ್ನು 3-0 ಅಂತರದಲ್ಲಿ ಗೆದ್ದು ಆಸಿಸ್ ಬಳಗವನ್ನು ವೈಟ್ ವಾಶ್ ಮಾಡಿದ ವಿಶ್ವದ ಮೊದಲ ತಂಡ ಎಂಬ ಕೀರ್ತಿಗೆ ಭಾಜನವಾಗಿತ್ತು. ಇದೀಗ ಆ ದಾಖಲೆಯನ್ನೂ ಮೀರಿಸುವಂತೆ ಶ್ರೀಲಂಕಾ ತಂಡವನ್ನು ತನ್ನದೇ ನೆಲದಲ್ಲಿ ಬಗ್ಗು ಬಡಿಯುವ ಮೂಲಕ ಟೂರ್ ವಾಶ್ ಮಾಡಿದ ವಿಶ್ವದ ಮೊದಲ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ. ಆ ಮೂಲಕ 3 ಟೆಸ್ಟ್, 5 ಏಕದಿನ ಹಾಗೂ ಒಂದು ಟಿ20 ಗೆಲುವಿನೊಂದಿಗೆ ಇಡೀ ಪ್ರವಾಸವನ್ನು ಭಾರತ ತಂಡ 9-0 ಅಂತರದಲ್ಲಿ  ಗೆದ್ದುಕೊಂಡಂತಾಗಿದೆ.
ಈ ವರೆಗೂ ವಿಶ್ವದ ಯಾವುದೇ ತಂಡ ಇಂತಹುದೊಂದು ಸಾಧನೆ ಮಾಡಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com