ಹಾರ್ದಿಕ್ ಪಾಂಡ್ಯ ನೈಜ ಆಟದೊಂದಿಗೆ ಪರಿಸ್ಥಿತಿಗೆ ತಕ್ಕಂತೆ ಆಟವಾಡುತ್ತಿದ್ದಾರೆ: ದ್ರಾವಿಡ್

ಟೀಂ ಇಂಡಿಯಾದ ಆಲ್ ರೌಂಡರ್, ಸ್ಫೋಟಕ ಬ್ಯಾಟ್ಸ್ ಮನ್ ಹಾರ್ದಿಕ್ ಪಾಂಡ್ಯಗೆ ವೃತ್ತಿ ಜೀವನದಲ್ಲಿ ಮಹತ್ವದ ತಿರುವು ಲಭಿಸಿದೆ ಎಂದು ಟೀಂ ಇಂಡಿಯಾದ ಮಾಜಿ...
ಹಾರ್ದಿಕ್ ಪಾಂಡ್ಯ, ರಾಹುಲ್ ಗಾಂಧಿ
ಹಾರ್ದಿಕ್ ಪಾಂಡ್ಯ, ರಾಹುಲ್ ಗಾಂಧಿ
Updated on: 
ನವದೆಹಲಿ: ಟೀಂ ಇಂಡಿಯಾದ ಆಲ್ ರೌಂಡರ್, ಸ್ಫೋಟಕ ಬ್ಯಾಟ್ಸ್ ಮನ್ ಹಾರ್ದಿಕ್ ಪಾಂಡ್ಯಗೆ ವೃತ್ತಿ ಜೀವನದಲ್ಲಿ ಮಹತ್ವದ ತಿರುವು ಲಭಿಸಿದೆ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ. 
ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಸಾಗುತ್ತಿರುವ ಏಕದಿನ ಸರಣಿಯಲ್ಲಿ ಪರಿಸ್ಥಿತಿಗೆ ತಕ್ಕಂತೆ ಹಾರ್ದಿಕ್ ಪಾಂಡ್ಯ ಆಟವಾಡುತ್ತಿದ್ದಾರೆ. ಚೆನ್ನೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ತಂಡವು 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾಗ ಎಂಎಸ್ ಧೋನಿ ಜತೆಗೂಡಿ ಶತಕದ ಜೊತೆಯಾಟ ಕಟ್ಟಿದ ಪಾಂಡ್ಯ ಆಕರ್ಷಕ ಅರ್ಧ ಶತಕ(83) ಬಾರಿಸುವ ಮೂಲಕ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು. 
ಇನ್ನು ಇಂದೋರ್ ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲೂ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದಿದ್ದರಲ್ಲದೆ ಬಿರುಸಿನ ಅರ್ಧಶತಕ(78) ಬಾರಿಸುವ ಮೂಲಕ ಭಾರತಕ್ಕೆ ಸರಣಿ ಗೆಲುವಿಗೆ ಕಾರಣವಾಗಿದ್ದರು. ಹೀಗೆ ಪರಿಸ್ಥಿತಿಗೆ ತಕ್ಕಂತೆ ಆಡುವ ಎಲ್ಲಾ ಸಾಮರ್ಥ್ಯವು ಹಾರ್ದಿಕ್ ಪಾಂಡ್ಯಗೆ ಇದೆ ಎಂದು ದ್ರಾವಿಡ್ ಪ್ರಶಂಸಿಸಿದ್ದಾರೆ. 
2015ರಲ್ಲಿ ಆಸ್ಟ್ರೇಲಿಯಾ ಎ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಆಡಿದ್ದರು. ಆಗ ರಾಹುಲ್ ದ್ರಾವಿಡ್ ತಂಡದ ಕೋಚ್ ಆಗಿದ್ದರು. ಆಗಲೇ ಹಾರ್ದಿಕ್ ಪಾಂಡ್ಯ ಗಮನಾರ್ಹ ಪ್ರದರ್ಶನ ನೀಡಿದ್ದರು. ಪ್ರಸ್ತುತ ಪಾಂಡ್ಯ ಬ್ಯಾಟಿಂಗ್ ಇತರೆ ಆಟಗಾರರು ಅನುಕರಿಸುವ ನಂಬಿಕೆಯನ್ನು ಹುಟ್ಟಿಸಿದ್ದಾರೆ. ನೈಜ ಆಟದೊಂಡಿಗೆ ಹಾರ್ದಿಕ್ ಪರಿಸ್ಥಿತಿಗೆ ತಕ್ಕ ಆಟವಾಡಿದ್ದಾರೆ. ಹಾಗಾಗಿ ಎಲ್ಲ ಶ್ರೇಯಸ್ಸು ಪಾಂಡ್ಯಗೆ ಸಲ್ಲಬೇಕು ಎಂದು ಡ್ರಾವಿಡ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com