ಬೆನ್ ಸ್ಟೋಕ್ಸ್ ಹಲ್ಲೆ ಮಾಡಿದ್ದು ಬ್ರಿಟಿಷ್ ಸೇನೆಯ ಮಾಜಿ ಯೋಧನ ಮೇಲೆ!

ಬ್ರಿಟಿಷ್ ಸೇನೆಯ ಮಾಜಿ ಯೋಧರೊಬ್ಬರ ಮೇಲೆ ಇಂಗ್ಲೆಂಡ್ ತಂಡದ ಆಲ್ ರೌಂಡರ್ ಬೆನ್ ಸ್ಟೋಕ್ಸ್ ದಾಳಿ ನಡೆಸಿದ್ದಾರೆ ಎಂದು ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ...
ಬೆನ್ ಸ್ಟೋಕ್ಸ್
ಬೆನ್ ಸ್ಟೋಕ್ಸ್
ಲಂಡನ್: ಬ್ರಿಟಿಷ್ ಸೇನೆಯ ಮಾಜಿ ಯೋಧರೊಬ್ಬರ ಮೇಲೆ ಇಂಗ್ಲೆಂಡ್ ತಂಡದ ಆಲ್ ರೌಂಡರ್ ಬೆನ್ ಸ್ಟೋಕ್ಸ್ ದಾಳಿ ನಡೆಸಿದ್ದಾರೆ ಎಂದು ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ. 
ಬೆನ್ ಸ್ಟೋಕ್ಸ್ ಬೀದಿಕಾಳಗ ಪ್ರಕರಣ ದಿನಕ್ಕೊಂದು ರೂಪ ಪಡೆದುಕೊಳ್ಳುತ್ತಿದೆ. ಸ್ಟೋಕ್ಸ್ ಹಲ್ಲೆ ನಡೆಸಿರುವ ವಿಡಿಯೋ ಬಿಡುಗಡೆಯಾಗಿದೆ. ಈ ಸಂಬಂಧ ಬೆನ್ ಸ್ಟೋಕ್ಸ್ ಮತ್ತು ಅವರ ಜತೆಗಿದ್ದ ಇಂಗ್ಲೆಂಡ್ ತಂಡದ ಮತ್ತೋರ್ವ ಆಟಗಾರ ಅಲೆಕ್ಸ್ ಹೇಲ್ಸ್ ರನ್ನು ರಾಷ್ಟ್ರೀಯ ತಂಡದಿಂದ ಅಮಾನತುಗೊಳಿಸಲಾಗಿತ್ತು. 
ಕಳೆದ ಭಾನುವಾರ ತಡರಾತ್ರಿ ಬ್ರಿಸ್ಟೇಲ್ ನ ನೈಟ್ ಕ್ಲಬ್ ವೊಂದರಲ್ಲಿ ಜಗಳ ಮಾಡಿಕೊಂಡಿದ್ದ ಸ್ಟೋಕ್ಸ್ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com