ಪಂದ್ಯ ಮುಗಿದ ಬಳಿಕ ಮಾತನಾಡಿದ ರಶೀದ್ ತಾವು ಕ್ರೀಸ್ ಗೆ ಬಂದ ಸಂದರ್ಭದಲ್ಲಿ ಧೋನಿಯನ್ನು ಕೊನೆಯ ಹಂತದಲ್ಲಿ ಒತ್ತಡ ಇರುವಾಗ ಹೇಗೆ ಸಿಕ್ಸರ್ ಸಿಡಿಸುವುದು ಎಂದು ಕೇಳಿದೆ. ಆಗ ಧೋನಿ ನೀಡಿದ ಸಲಹೆಯನ್ನು ಅನುಸರಿಸಿದ್ದಕ್ಕೆ ಎರಡು ಸಿಕ್ಸರ್ ಬಾರಿಸಲು ನೆರವಾಯಿತು. ಆದರೆ ಅವರ ರೀತಿಯಲ್ಲಿ ಫಿನಿಶ್ ಮಾಡಲು ಮಾತ್ರ ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.