ಐಪಿಲ್ 2018: ಮುಂಬೈ ಇಂಡಿಯನ್ಸ್ ವಿರುದ್ಧ ಸನ್​ ರೈಸರ್ಸ್​ ಗೆಲುವು

ಐಪಿಎಲ್ ಟಿ20​ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ಸನ್​ ರೈಸರ್ಸ್​ ಹೈದರಾಬಾದ್​ 31 ರನ್​​ಗಳ ಭರ್ಜರಿ...
ಸನ್​ ರೈಸರ್ಸ್​ ಹೈದರಾಬಾದ್ ತಂಡದ ಗೆಲುವಿನ ಸಂಭ್ರಮ
ಸನ್​ ರೈಸರ್ಸ್​ ಹೈದರಾಬಾದ್ ತಂಡದ ಗೆಲುವಿನ ಸಂಭ್ರಮ
Updated on: 
ಮುಂಬೈ: ಐಪಿಎಲ್ ಟಿ20​ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ಸನ್​ ರೈಸರ್ಸ್​ ಹೈದರಾಬಾದ್​ 31 ರನ್​​ಗಳ ಭರ್ಜರಿ ಗೆಲುವು ದಾಖಲಿಸಿದೆ.
ಇಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಹೈದರಾಬಾದ್​ ತಂಡ ಮುಂಬೈ ಬೌಲಿಂಗ್​ ದಾಳಿಗೆ ತತ್ತರಿಸಿ 18.4 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 118 ರನ್​ ಗಳಿಸಿತು. 
ಗೆಲುವಿಗೆ ಹೈದರಾಬಾದ್ ನೀಡಿದ 119 ರನ್ ಗಳ ಸಾಧಾರಣ ಗುರಿ ಬೆನ್ನತ್ತಿದ ಮುಂಬಯಿ ಇಂಡಿಯನ್ಸ್  ತಂಡ, 21 ರನ್ ಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತ ಅನುಭವಿಸಿತು.
ಮುಂಬೈ 18.5 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 87 ರನ್​ ಗಳಿಸುವ ಮೂಲಕ ಹೈದರಾಬಾದ್​ ನೀಡಿದ್ದ ಸುಲಭ ಗುರಿಯನ್ನು ತಲುಪಲಾಗದೇ ಸೋಲಿಗೆ ಶರಣಾಯಿತು. 
ಹೈದರಾಬಾದ್ ಪರ ಕೇನ್​ ವಿಲಿಯಮ್ಸನ್​(29) ಹಾಗೂ ಯೂಸೂಫ್​ ಪಠಾಣ್​(29) ಬಿಟ್ಟರೆ ಉಳಿದ ಯಾವೊಬ್ಬ ಬ್ಯಾಟ್ಸ್​ಮನ್​ ಗಮನಾರ್ಹ ಪ್ರದರ್ಶನ ನೀಡಲಿಲ್ಲ.
ಮುಂಬೈ ಪರ ಮಿಚೆಲ್​ ಮೆಕ್ಲೆಹೆಂಗನ್​, ಹಾರ್ದಿಕ್​ ಪಾಂಡ್ಯ ಹಾಗೂ ಮಯಾಂಕ್​ ಮಾರ್ಕಂಡೆ ತಲಾ ಎರಡು ವಿಕೆಟ್ ಪಡೆದರೆ, ಜಸ್ಪ್ರಿತ್​ ಬೂಮ್ರಾ ಹಾಗೂ ಮುಸ್ತಫಿಝುರ್ ರಹಮಾನ್ ತಲಾ ಒಂದೊಂದು ವಿಕೆಟ್​ ಪಡೆದು ಮಿಂಚಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com