ಕ್ರಿಕೆಟ್: ಟೀಂ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸದ ವೇಳಾಪಟ್ಟಿ ಪ್ರಕಟ

ಭಾರತ ಕ್ರಿಕೆಟ್ ತಂಡದ 2018-2019ನೇ ಸಾಲಿನ ಆಸ್ಟ್ರೇಲಿಯಾ ಪ್ರವಾಸದ ವೇಳಾಪಟ್ಟಿ ಸೋಮವಾರ ಬಿಡುಗಡೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೋಲ್ಕತಾ: ಭಾರತ ಕ್ರಿಕೆಟ್ ತಂಡದ 2018-2019ನೇ ಸಾಲಿನ ಆಸ್ಟ್ರೇಲಿಯಾ ಪ್ರವಾಸದ ವೇಳಾಪಟ್ಟಿ ಸೋಮವಾರ ಬಿಡುಗಡೆಯಾಗಿದೆ.
ಭಾರತ ಕ್ರಿಕೆಟ್ ತಂಡದ ಮುಂಬರುವ ಆಸ್ಟ್ರೇಲಿಯಾ ಪ್ರವಾಸದ ವೇಳಾಪಟ್ಟಿ ಬಿಡುಗಡೆಯಾಗಿದ್ದು, ನವೆಂಬರ್ 21ರಿಂದ ಬ್ರಿಸ್ಬೇನ್ ನಲ್ಲಿ ಟಿ20 ಪಂದ್ಯವನ್ನಾಡುವ ಮೂಲಕ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸ ಆರಂಭವಾಗುತ್ತದೆ. ನವೆಂಬರ್ 21ರಿಂದ 2019 ಜನವರಿ 18ರವರೆಗೂ ಭಾರತ ತಂಡ ಆಸ್ಟ್ರೇಲಿಯಾದಲ್ಲೇ ಉಳಿಯಲಿದ್ದು, ಈ ವೇಳೆ ಮೂರು ಟಿ20 ಪಂದ್ಯ, 3 ಏಕದಿನ ಮತ್ತು ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈ ಪೈಕಿ ಡಿಸೆಂಬರ್ 6 ರಿಂದ 10ರವರೆಗೂ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯ ಹಗಲು ರಾತ್ರಿಯ ಟೆಸ್ಟ್ ಪಂದ್ಯವಾಗಿರುವುದು ವಿಶೇಷ.
ಅಡಿಲೇಡ್ ನಲ್ಲಿ ಮೊದಲ ಬಾರಿಗೆ ಹಗಲು ರಾತ್ರಿ ಟೆಸ್ಟ್ ಪಂದ್ಯ?
ಇನ್ನು ಈಗಗಾಲೇ ದೇಶೀಯ ಟೂರ್ನಿಗಳಲ್ಲಿ ಹಗಲು-ರಾತ್ರಿ ಟೆಸ್ಟ್ ಪಂದ್ಯಗಳು ಆಕರ್ಷಣೆ ಪಡೆಯುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲೂ ಇದನ್ನು ಜಾರಿಗೆ ತರಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಸದರ್ಲೆಂಡ್ ಅವರು, ಅಡಿಲೇಡ್ ನಲ್ಲೇ ಹಗಲು ರಾತ್ರಿ ಟೆಸ್ಟ್ ಪಂದ್ಯವನ್ನಾಡಿಸುವ ಕುರಿತು ಪ್ರಾಥಮಿಕ ಚರ್ಚೆ ಮುಕ್ತಾಯವಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮತ್ತಷ್ಟು ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಾಗುತ್ತದೆ. ಉಳಿದಂತೆ ವೇಳಾಪಟ್ಟಿ ಅಂತಿಮವಾಗಿದ್ದು, ವೇಳಾಪಟ್ಟಿಯಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ ಎಂದು  ಹೇಳಿದ್ದಾರೆ.
ಪ್ರಸ್ತುತ ಬಿಡುಗಡೆಯಾಗಿರುವ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸದ ವೇಳಾಪಟ್ಟಿ ಇಂತಿದೆ.
ಮೂರು ಪಂದ್ಯಗಳ ಟಿ20 ಸರಣಿ
ನವೆಂಬರ್ 21 ರಂದು ಮೊದಲ ಟಿ20 ಪಂದ್ಯ, ಬ್ರಿಸ್ಬೇನ್ ನ ಗಬ್ಬಾ ಕ್ರೀಡಾಂಗಣ
ನವೆಂಬರ್ 23ರಂದು 2ನೇ ಟಿ20 ಪಂದ್ಯ, ಮೆಲ್ಬೋರ್ನ್ ನ ಎಂಸಿಜಿ ಕ್ರೀಡಾಂಗಣ
ನವೆಂಬರ್ 25ರಂದು 3ನೇ ಟಿ20 ಪಂದ್ಯ, ಸಿಡ್ನಿಯ ಎಸ್ ಸಿಜಿ ಕ್ರೀಡಾಂಗಣ
-----
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ
ಡಿಸೆಂಬರ್ 6 ರಿಂದ 10, ಮೊದಲ ಟೆಸ್ಟ್ ಪಂದ್ಯ. ಅಡಿಲೇಡ್ ನ ಓವಲ್ ಕ್ರೀಡಾಂಗಣ
ಡಿಸೆಂಬರ್ 14 ರಿಂದ 18, ಎರಡನೇ ಟೆಸ್ಟ್ ಪಂದ್ಯ, ಪರ್ತ್
ಡಿಸೆಂಬರ್ 26 ರಿಂದ 30, ಮೂರನೇ ಟೆಸ್ಟ್ ಪಂದ್ಯ, ಮೆಲ್ಬೋರ್ನ್ ನ ಎಂಸಿಜಿ ಕ್ರೀಡಾಂಗಣ
2019 ಜನವರಿ 3 ರಿಂದ 7, ನಾಲ್ಕನೇ ಟೆಸ್ಟ್ ಪಂದ್ಯ, ಸಿಡ್ನಿಯ ಎಸ್ ಸಿಜಿ ಕ್ರೀಡಾಂಗಣ
-----
ಮೂರು ಪಂದ್ಯಗಳ ಏಕದಿನ ಸರಣಿ
2019 ಜನವರಿ 12, ಮೊದಲ ಏಕದಿನ ಪಂದ್ಯ, ಸಿಡ್ನಿಯ ಎಸ್ ಸಿಜಿ ಕ್ರೀಡಾಂಗಣ
2019 ಜನವರಿ 15, ಎರಡನೇ ಏಕದಿನ ಪಂದ್ಯ, ಅಡಿಲೇಡ್ ನ ಓವಲ್ ಕ್ರೀಡಾಂಗಣ
2019 ಜನವರಿ 15, ಮೂರನೇ ಏಕದಿನ ಪಂದ್ಯ, ಮೆಲ್ಬೋರ್ನ್ ನ ಎಂಸಿಜಿ ಕ್ರೀಡಾಂಗಣ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com