ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಜೊತೆ ಮದುವೆ, ಬಾಲಿವುಡ್ ನಟಿ ಹೇಳಿದ್ದೇನು?

ಟೀಂ ಇಂಡಿಯಾದ ಆಟಗಾರ ಹಾರ್ದಿಕ್ ಪಾಂಡ್ಯ ಅವರು ಬಾಲಿವುಡ್ ನಟಿ ಇಶಾ ಗುಪ್ತಾ ಜತೆ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು ಇದನ್ನು ನಟಿ ಸ್ಪಷ್ಟನೆ ನೀಡಿದ್ದಾರೆ...
ಹಾರ್ದಿಕ್ ಪಾಂಡ್ಯ, ಇಶಾ ಗುಪ್ತಾ
ಹಾರ್ದಿಕ್ ಪಾಂಡ್ಯ, ಇಶಾ ಗುಪ್ತಾ
ನವದೆಹಲಿ: ಟೀಂ ಇಂಡಿಯಾದ ಆಟಗಾರ ಹಾರ್ದಿಕ್ ಪಾಂಡ್ಯ ಅವರು ಬಾಲಿವುಡ್ ನಟಿ ಇಶಾ ಗುಪ್ತಾ ಜತೆ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು ಇದನ್ನು ನಟಿ ಸ್ಪಷ್ಟನೆ ನೀಡಿದ್ದಾರೆ.
ಹಾರ್ದಿಕ್ ಮತ್ತು ಇಶಾ ಗುಪ್ತಾ ಜೊತೆ ಜೊತೆಯಾಗಿ ತಿರುಗಾಡುತ್ತಿದ್ದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹಲ್ ಚಲ್ ಹುಟ್ಟಿಸಿದ್ದವು. ಈ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. 
ಆದರೆ ಇದಕ್ಕೆ ಇಶಾ ಗುಪ್ತಾ ಪ್ರತಿಕ್ರಿಯಿಸಿದ್ದು ನಿಮ್ಮೆಲ್ಲರ ಪ್ರಶ್ನೆಗೆ ಪ್ರತಿಕ್ರಿಯೆಯಂತೆ, ನಾನು ಸದ್ಯಕ್ಕಂತೂ ಯಾರನ್ನೂ ಕೂಡ ಮದುವೆ ಆಗುವುದಿಲ್ಲ. ಮಾಧ್ಯಮ ನನಗೆ ಸದಾ ಬೆಂಬಲ ಮಾಡಿದೆ. 
ನನ್ನ ವೈಯಕ್ತಿಕ ಬದುಕನ್ನು ಹಾಸ್ಯ ಮಾಡಲು ನನಗೆ ಇಷ್ಟವಿಲ್ಲ ಮತ್ತು ಇನ್ನೊಬ್ಬರ ವ್ಯಕ್ತಿತ್ವಕ್ಕೆ ಗೌರವ ನೀಡುತ್ತೇನೆ ಎಂದು 32 ವರ್ಷದ ಇಶಾ ಗುಪ್ತಾ ಟ್ವೀಟರ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ. 
ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಅವರ ಹೆಸರು ಬಾಲಿವುಡ್ ನಟಿಯರಾದ ಊರ್ವಶಿ ರೌಟೇಲಾ, ಲಿಶಾ ಶರ್ಮ, ಪರಿಣೀತಿ ಚೋಪ್ರಾ, ಶಿಬಾನಿ ದಾಂಡೇಕರ್ ಮತ್ತು ಎಲ್ಲಿ ಅವ್ರಾಮ್ ಜತೆಯೂ ಕೇಳಿಬಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com