ನಾಟಿಂಗ್ಹ್ಯಾಮ್: ಟೀಂ ಇಂಡಿಯಾದ ಯುವ ವೇಗಿ ಜಸ್ ಪ್ರೀತ್ ಬುಮ್ರಾ ಕಳೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಮಾಡಿದ್ದ ತಪ್ಪಿನಿಂದ ಇನ್ನು ಬುದ್ಧಿ ಕಲಿತಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ 5 ವಿಕೆಟ್ ಗಳನ್ನು ಪಡೆದು ತಂಡವನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದ್ದಾರೆ. ಇನ್ನು ಇದೇ ಪಂದ್ಯದಲ್ಲಿ ಮತ್ತೊಮ್ಮೆ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಫೈನಲ್ ವಿರುದ್ಧ ಮಾಡಿದ್ದ ತಪ್ಪನ್ನೇ ಮಾಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಜಸ್ ಪ್ರೀತ್ ಬುಮ್ರಾ ಎಸೆದ ಒಂದು ನೋಬಾಲ್ ನಿಂದ ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೋಲುವಂತವಾಯಿತು.
ಇದೀಗ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲೂ ನೋಬಾಲ್ ಮಾಡಿದ್ದಾರೆ. ಇಂಗ್ಲೆಂಡ್ ಆಟಗಾರ ರಶೀದ್ ಖಾನ್ ಬುಮ್ರಾ ಎಸೆತದಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿದ್ದರು. ಬುಮ್ರಾ ಬೌಲಿಂಗ್ ಅನ್ನು ಪರೀಕ್ಷಿಸಿದಾಗ ಬುಮ್ರಾ ಗೆರೆಯ ಹೊರಗಡೆ ಕಾಲು ಇಟ್ಟಿದ್ದನ್ನು ಕಂಡ ಅಂಪೈರ್ ನೋಬಾಲ್ ಎಂದು ಘೋಷಿಸಿದ್ದರು.
ಜೀವದಾನ ಪಡೆದ ರಶೀದ್ ಖಾನ್ ಅಜೇಯ 30 ರನ್ ಗಳಿಸಿ ಆಡುತ್ತಿದ್ದಾರೆ. ಬುಮ್ರಾ ನೋಬಾಲ್ ಮಾಡದಿದ್ದರೆ ನಿನ್ನೆಯೇ ಟೀಂ ಇಂಡಿಯಾ ಮೂರನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ನಗೆ ಬೀರುತ್ತಿತ್ತು.
ನೋಬಾಲ್ ಕುರಿತಂತೆ ಟ್ವೀಟರಿಗರು ಜಸ್ ಪ್ರೀತ್ ಬುಮ್ರಾರನ್ನು ಟ್ರೋಲ್ ಮಾಡುತ್ತಿದ್ದಾರೆ.