ಕ್ಯಾಚ್ ಮೂಲಕ 35 ವಿಕೆಟ್; ನೂತನ ವಿಶ್ವ ದಾಖಲೆ ಬರೆದ ಅಡಿಲೇಡ್ ಟೆಸ್ಟ್!

ಆಸ್ಚ್ರೇಲಿಯಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದ್ದು, ಕ್ಯಾಚ್ ಗಳ ಮೂಲಕವೇ ಅತೀ ಹೆಚ್ಚು ವಿಕೆಟ್ ಪತನವಾದ ಪಂದ್ಯ ಎಂದ ದಾಖಲೆಗೂ ಅಡಿಲೇಡ್ ಟೆಸ್ಟ್ ಪಂದ್ಯ ಸಾಕ್ಷಿಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಅಡಿಲೇಡ್: ಆಸ್ಚ್ರೇಲಿಯಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದ್ದು, ಕ್ಯಾಚ್ ಗಳ ಮೂಲಕವೇ ಅತೀ ಹೆಚ್ಚು ವಿಕೆಟ್ ಪತನವಾದ ಪಂದ್ಯ ಎಂದ ದಾಖಲೆಗೂ ಅಡಿಲೇಡ್ ಟೆಸ್ಟ್ ಪಂದ್ಯ ಸಾಕ್ಷಿಯಾಗಿದೆ.
ಹೌದು.. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಡಿಲೇಡ್ ಓವಲ್ ನಲ್ಲಿ ನಡೆದ ಪಂದ್ಯದಲ್ಲಿ ಒಟ್ಟು 35 ಕ್ಯಾಚ್ ಗಳು ದಾಖಲಾಗಿವೆ. ಆ ಮೂಲಕ ಒಟ್ಟು 40 ವಿಕೆಟ್ ಗಳ ಪೈಕಿ ಬರೊಬ್ಬರಿ 35 ವಿಕೆಟ್ ಗಳ ಕ್ಯಾಚ್ ಮೂಲಕ ದಾಖಲಾಗಿವೆ. ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ಅಪರೂಪದ ದಾಖಲೆಯಾಗಿದ್ದು, ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ ಪಂದ್ಯವೊಂದರಲ್ಲಿ 35 ಆಟಗಾರರು ಕ್ಯಾಚ್ ಮೂಲಕವೇ ಔಟ್ ಆಗಿದ್ದಾರೆ. 
ಭಾರತ ಮತ್ತು ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ ನಲ್ಲಿ ಎಲ್ಲ 10 ಆಟಗಾರರು ಕ್ಯಾಚ್ ಮೂಲಕವೇ ಔಟ್ ಆಗಿದ್ದಾರೆ. ಈ ಹಿಂದೆ 2018ರ ಕೇಪ್ ಟೌನ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ 34 ವಿಕೆಟ್ ಕ್ಯಾಚ್ ಮೂಲಕ ಪಡೆಯಲಾಗಿತ್ತು. ವಿಪರ್ಯಾಸ ವೆಂದರೆ ಇದೇ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ಘಟನೆ ಕೂಡ ನಡೆದಿತ್ತು. ಇದಕ್ಕೂ ಮೊದಲು 1992ರ ಪರ್ಥ್ ನಲ್ಲಿ ನಡೆದ ಆಸ್ಟ್ರೇಲಿಯಾ, ಟೀಂ ಇಂಡಿಯಾ ವಿರುದ್ಧ ಪಂದ್ಯದಲ್ಲಿ 33 ಮಂದಿ ಕ್ಯಾಚ್ ನೀಡಿ ಔಟಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com