ಕ್ರಿಕೆಟ್

2 ನೇ ಟೆಸ್ಟ್ ಪಂದ್ಯದ 3 ನೇ ದಿನ: 4 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದ ಆಸ್ಟ್ರೇಲಿಯಾ

2 ನೇ ಟೆಸ್ಟ್ ಪಂದ್ಯದ 3 ನೇ ದಿನ:  4 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದ ಆಸ್ಟ್ರೇಲಿಯಾ
ಆಸ್ಟ್ರೇಲಿಯಾ
Published On :
ಪರ್ತ್: ಪರ್ತ್ ನಲ್ಲಿ ನಡೆಯುತ್ತಿರುವ 2 ನೇ ಟೆಸ್ಟ್ ಪಂದ್ಯದ 3 ನೇ ದಿನಾಂತ್ಯಕ್ಕೆ ಆಸ್ಟ್ರೇಲಿಯಾ ತಂಡ 4 ವಿಕೆಟ್ ಕಳೆದುಕೊಂಡಿದ್ದು 132 ರನ್ ಗಳಿಸಿದೆ. 
ಉಸ್ಮಾನ್ ಖಾವಾಜ ಹಾಗೂ ಟ್ರಾವಿಸ್ ಹೆಡ್ ಜೊತೆಯಾಟದಿಂದ ಆಸ್ಟ್ರೇಲಿಯಾ ಭಾರತದ ವಿರುದ್ಧ 175 ರನ್ ಮುಂದಿದೆ. 2 ನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯ ಉತ್ತಮ ಆರಂಭ ಕಂಡಿತ್ತು. ಆದರೆ ಆರನ್ ಫಿಂಚ್ (25) ಕೈ ಬೆರಳಿಗೆ ಗಾಯವಾಗಿ ರಿಟರ್ಡ್ ಹರ್ಟ್ ಆದ ಕಾರಣ ಆಸ್ಟ್ರೇಲಿಯಾ ವೇಗ ಸ್ವಲ್ಪ ಕುಂದಿತ್ತು. ನಂತರ ಮಾರ್ಕಸ್ ಹ್ಯಾರಿಸ್ (20) ರನ್ ಶಾನ್ ಮಾರ್ಷ್ (5) ಹಾಗೂ ಪೀಟರ್  ಹ್ಯಾಂಡ್ಸ್ಕಾಂಬ್ (13) ಅತ್ಯಂತ ಕಡಿಮೆ ರನ್ ಗಳಿಗೆ ನಿರ್ಗಮಿಸಿದರು. ಈ ವೇಳೆ ಆಸ್ಟ್ರೇಲಿಯಾ 85 ಕ್ಕೆ ಮೂರು ವಿಕೆಟ್ ನಷ್ಟ ಎದುರಿಸಿ ಸಂಕಷ್ಟದಲ್ಲಿತ್ತು.  ಖಾವಾಜ ಹಾಗೂ ಹೆಡ್ ಉತ್ತಮ ಆಟದ ಪರಿಣಾಮವಾಗಿ ಆಸ್ಟ್ರೇಲಿಯಾ ರನ್ ಗಳಿಕೆ ಏರುಗತಿಯಲ್ಲಿತ್ತು. ಆದರೆ 19 ರನ್ ಗಳಿಸಿದ್ದ ಹೆಡ್ ಕಳಪೆ ಹೊಡೆತದಿಂದ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ಮರಳಿದರು, ದಿನಾಂತ್ಯದ ವೇಳೆ ಆಸ್ಟ್ರೇಲಿಯಾ 132 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿದ್ದು ಕ್ರೀಸ್ ನಲ್ಲಿ ಖಾವಾಜ ಹಾಗೂ ನಾಯಕ ಟಿಮ್  ಪೈನ್ ಉಳಿದಿದ್ದಾರೆ. 
ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 283 ರನ್ ಗಳಿಗೆ ಆಲ್ ಔಟ್ ಆಗಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.