ಶಮಿ ಮಾರಕ ಬೌಲಿಂಗ್ ಗೆ ತತ್ತರಿಸಿದ ಕಾಂಗರೂಗಳು, ಭಾರತಕ್ಕೆ ಗೆಲ್ಲಲು 287 ರನ್ ಗುರಿ

ಬೃಹತ್ ಗುರಿಯ ಮಹದಾಸೆಯೊಂದಿಗೆ 4ನೇ ದಿನದಾಟ ಆರಂಭಿಸಿದ್ದ ಆಸ್ಚ್ರೇಲಿಯನ್ನರಿಗೆ ಭಾರತೀಯ ವೇಗಿ ಮಹಮದ್ ಶಮಿ ಅವರ ಮಾರಕ ಬೌಲಿಂಗ್ ದುಸ್ವಪ್ನವಾಗಿ ಕಾಡಿದ್ದು, ಶಮಿ ಬೌಲಿಂಗ್ ಗೆ ತತ್ತರಿಸಿದ ಕಾಂಗರೂಗಳು ಭಾರತಕ್ಕೆ ಗೆಲ್ಲಲು 287 ರನ್ ಗಳ ಸವಾಲಿನ ಗುರಿ ನೀಡಿದ್ದಾರೆ.
ಶಮಿ ಮಾರಕ ಬೌಲಿಂಗ್ ಗೆ ತತ್ತರಿಸಿದ ಕಾಂಗರೂ ಪಡೆ
ಶಮಿ ಮಾರಕ ಬೌಲಿಂಗ್ ಗೆ ತತ್ತರಿಸಿದ ಕಾಂಗರೂ ಪಡೆ
ಪರ್ತ್: ಬೃಹತ್ ಗುರಿಯ ಮಹದಾಸೆಯೊಂದಿಗೆ 4ನೇ ದಿನದಾಟ ಆರಂಭಿಸಿದ್ದ ಆಸ್ಚ್ರೇಲಿಯನ್ನರಿಗೆ ಭಾರತೀಯ ವೇಗಿ ಮಹಮದ್ ಶಮಿ ಅವರ ಮಾರಕ ಬೌಲಿಂಗ್ ದುಸ್ವಪ್ನವಾಗಿ ಕಾಡಿದ್ದು, ಶಮಿ ಬೌಲಿಂಗ್ ಗೆ ತತ್ತರಿಸಿದ ಕಾಂಗರೂಗಳು ಭಾರತಕ್ಕೆ ಗೆಲ್ಲಲು 287 ರನ್ ಗಳ ಸವಾಲಿನ ಗುರಿ ನೀಡಿದ್ದಾರೆ.
ನಿನ್ನೆ 3ನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದ್ದ ಆಸ್ಟ್ರೇಲಿಯಾ ತಂಡಕ್ಕೆ ಉಸ್ಮಾನ್ ಖವಾಜ ಮತ್ತು ನಾಯಕ ಟಿಮ್ ಪೈನ್ ಅವರ ಅಮೋಘ ಜೊತೆಯಾಟದಿಂದ ಬೃಹತ್ ಗುರಿ ನೀಡುವ ಹುಮ್ಮಸ್ಸಿನಲ್ಲಿತ್ತು. ಭೋಜನ ವಿರಾಮದ ವರೆಗೂ ಯಾವುದೇ ಅಪಾಯಕ್ಕೆ ದಾರಿ ಮಾಡಿಕೊಂಡದಂತೆ ಎಚ್ಚರಿಕೆ ವಹಿಸಿ ಅದರಲ್ಲಿ ಯಶಸ್ಸು ಕೂಡ ಸಾಧಿಸಿತ್ತು. ಆದರೆ ಭೋಜನ ವಿರಾಮದ ಬಳಿಕ ಭಾರತೀಯ ವೇಗಿ ಮಹಮದ್ ಶಮಿ ಮಾರಕ ಬೌಲಿಂಗ್ ಗೆ ಕಾಂಗರೂ ಪಡೆ ಅಕ್ಷರಶಃ ತತ್ತರಿಸಿ ಹೋಯಿತು.
37 ರನ್ ಗಳಿಸಿ ಅರ್ಧಶತಕದತ್ತ ಹೆಜ್ಜೆ ಹಾಕುತ್ತಿದ್ದ ಟಿಮ್ ಪೈನೆ ಅವರನ್ನು ಶಮಿ ಪೆವಿಲಿಯನ್ ಗೆ ಅಟ್ಟಿದರು. ಇದರ ಬೆನ್ನಲ್ಲೇ ನಿನ್ನೆ ಗಾಯಗೊಂಡು ಹೊರಗುಳಿದಿದ್ದ ಫಿಂಚ್ ಕಣಕ್ಕಿಳಿದರಾದರೂ ಮತ್ತದೇ ಶಮಿ ಬೌಲಿಂಗ್ ನಲ್ಲಿ ಪಂತ್ ಗೆ ಕ್ಯಾಚಿತ್ತು ಹೊರ ನಡೆದರು. ಈ ಎರಡು ದಿಢೀರ್ ವಿಕೆಟ್ ವಿಕೆಟ್ ಗಳು ಭಾರತೀಯ ಅಭಿಮಾನಿಗಳಲ್ಲಿ ಹರ್ಷ ಮೂಡಿಸಿತ್ತು. ಈ ಎರಡು ವಿಕೆಟ್ ಗಳಿಂದ ಚೇತರಿಸಿಕೊಳ್ಳಲು ಭಾರತೀಯ ಬೌಲರ್ ಗಳು ಅವಕಾಶವನ್ನೇ ನೀಡಲಿಲ್ಲ. ಪ್ರಮುಖವಾಗಿ ಶಮಿ ಮತ್ತು ಬುಮ್ರಾ ಜುಗಲ್ ಬಂದಿ ಆಸಿಸ್ ಬ್ಯಾಟ್ಸಮನ್ ಗಳ ಮೇಲೆ ತಮ್ಮ ಪ್ರಭಾವಿ ಬೌಲಿಂಗ್ ಮೂಲಕ ಒತ್ತಡ ಹೇರಿದರು.
ಪರಿಣಾಮ 72 ರನ್ ಗಳಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಉಸ್ಮಾನ್ ಖವಾಜ ವೇಗಿ ಶಮಿ ಬೌಲಿಂಗ್ ನಲ್ಲಿ ಪಂತ್ ಗೆ ಕ್ಯಾಚಿತ್ತು ಹೊರ ನಡೆದರು. ಅದರೊಂದಿಗೆ ಕಾಂಗರೂಗಳ ಬೃಹತ್ ಮೊತ್ತದ ಆಸೆಗೆ ಶಮಿ ಬಹುತೇಕೆ ನೀರೆರಚಿದ್ದರು.  ಬಳಿಕ ಬಂದ ಪ್ಯಾಟ್ ಕಮಿನ್ಸ್ 1 ರನ್ ಗೆ ಬುಮ್ರಾ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆದರೆ, ನಥನ್ ಲೈಯಾನ್ ಶಮಿ ಬೌಲಿಂಗ್ ನಲ್ಲಿ ಹನುಮ ವಿಹಾರಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ಜಸ್ ಪ್ರೀತ್ ಬುಮ್ರಾ ಮಿಚೆಲ್ ಸ್ಟಾರ್ಕ್ ರನ್ನು ಬೋಲ್ಡ್ ಮಾಡುವ ಮೂಲಕ ಆಸಿಸ್ ಇನ್ನಿಂಗ್ಸ್ ಗೆ ತೆರೆ ಎಳೆದರು. ಆ ಮೂಲಕ ಆಸ್ಟ್ರೇಲಿಯಾ ತಂಡ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 243 ರನ್ ಗಳಿಗೆ ಆಲೌಟ್ ಆಗಿದ್ದು, ಭಾರತಕ್ಕೆ ಗೆಲ್ಲಲು 287 ರನ್ ಗಳ ಸವಾಲಿನ ಗುರಿ  ನೀಡಿದೆ.
ಇನ್ನು ಭಾರತದ ಪರ ವೇಗಿ ಮಹಮದ್ ಶಮಿ 6 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರೆ, ಜಸ್ ಪ್ರೀತ್ ಬುಮ್ರಾ 2 ಮತ್ತು ಇಶಾಂತ್ ಶರ್ಮಾ 1 ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com