ಜೋಹಾನ್ಸ್ ಬರ್ಗ್: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ವೇಗಿ ಜಸ್ ಪ್ರೀತ್ ಬುಮ್ರಾ ಅದ್ಭುತವಾಗಿ ಫೀಲ್ಡಿಂಗ್ ಪ್ರದರ್ಶನ ನೀಡಿದ್ದಾರೆ.
ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಬುಮ್ರಾ ಮೇಲಕ್ಕೆ ಡೈವ್ ಮಾಡುವ ಮೂಲಕ ಸಿಕ್ಸರ್ ಅನ್ನು ತಡೆದಿದ್ದರು. ಆದರೆ ಪ್ರಯೋಜನವಾಗಲಿಲ್ಲ. ಅಂಪೈರ್ ಅದನ್ನು ಸಿಕ್ಸರ್ ಎಂದು ಘೋಷಿಸಿದರು.
ಕಾರಣ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ ನೂತನ ನಿಯಮಗಳು. ಬುಮ್ರಾ ಸಿಕ್ಸರ್ ತಡೆಯುವ ಮುನ್ನ ಬೌಂಡರಿ ಗೆರೆಯನ್ನು ಸ್ಪರ್ಶಿಸಿದ್ದರು. ಅಲ್ಲಿಂದಲೇ ಮೇಲಕ್ಕೆ ಜಂಪ್ ಮಾಡಿ ಚೆಂಡನ್ನು ಮೈದಾನದ ಒಳಕ್ಕೆ ಎಸೆದಿದ್ದರು.
ಹೀಗಾಗಿ ಹಾರ್ದಿಕ್ ಪಾಂಡ್ಯ ಎಸೆದ ಚೆಂಡಿನಲ್ಲಿ ಡೇವಿಡ್ ಮಿಲ್ಲರ್ ಹೊಡೆತವನ್ನು ಸಿಕ್ಸರ್ ಎಂದು ಘೋಷಿಸಲಾಯಿತು. ಆದರೂ ಬುಮ್ರಾ ಫೀಲ್ಡಿಂಗ್ ಪ್ರೇಕ್ಷಕರಲ್ಲಿ ರೋಮಾಂಚನ ಉಂಟು ಮಾಡಿತ್ತು.