2 ನೇ ಟಿ20 ಪಂದ್ಯ: ಭಾರತದ ವಿರುದ್ಧ ದಕ್ಷಿಣ ಆಫ್ರಿಕಾಗೆ 6 ವಿಕೆಟ್ ಗಳ ಗೆಲುವು, ಸರಣಿಯಲ್ಲಿ ಸಮಬಲ

ದಕ್ಷಿಣ ಆಫ್ರಿಕಾ-ಭಾರತದ ನಡುವಿನ 2 ನೇ ಟಿ-20 ಪಂದ್ಯದಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ 6 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ.
ದಕ್ಷಿಣ ಆಫ್ರಿಕಾ
ದಕ್ಷಿಣ ಆಫ್ರಿಕಾ

ಸೆಂಚ್ಯೂರಿಯನ್: ದಕ್ಷಿಣ ಆಫ್ರಿಕಾ-ಭಾರತದ ನಡುವಿನ 2 ನೇ ಟಿ-20 ಪಂದ್ಯದಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ 6 ವಿಕೆಟ್ ಗಳ  ಜಯ ಗಳಿಸಿದೆ.

ಭಾರತದ ನೀಡಿದ್ದ 189 ರನ್ ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 4 ವಿಕೆಟ್ ನಷ್ಟಕ್ಕೆ 18.4 ಓವರ್ ಗಳಿಗೆ 189 ರನ್ ಗಳಿಸಿ ಭಾರತದ ವಿರುದ್ಧ ಗೆಲ್ಲುವ ಮೂಲಕ 1-1 ಅಂತರದಿಂದ ಸರಣಿಯಲ್ಲಿ ಸಮಬಲ ಸಾಧಿಸಿದೆ.

ದಕ್ಷಿಣ ಆಫ್ರಿಕಾ ಪರ ಡುಮನಿ 64 ರನ್ ಗಳಿಸಿದರೆ ಹೆಂಡ್ರಿಕ್ಸ್ 26 ರನ್ ಗಳಿಸಿ ಕ್ಲಾಸೆನ್ 69 ಮಿಲ್ಲರ್ 5 ರನ್, ಔಟಾಗದೇ ಬೆಹರ್ಡಿನ್ 16 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು,

ಭಾರತದ ಪರ  ಜಯದೇವ್‌ ಉನ ದ್ಕತ್‌  ಗೆ 2  ಶಾರ್ದೂಲ್ ಪಾಂಡ್ಯಗೆ ತಲಾ ಒಂದು ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com