ಆರ್ ಅಶ್ವಿನ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ

2018ರ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಪಾಲಾಗಿದ್ದ ಟೀಂ ಇಂಡಿಯಾದ ಖ್ಯಾತ ಸ್ಪಿನ್ ಬೌಲರ್ ಅದೇ ತಂಡದ...
ಆರ್ ಅಶ್ವಿನ್
ಆರ್ ಅಶ್ವಿನ್
ಪಂಜಾಬ್: 2018ರ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಪಾಲಾಗಿದ್ದ ಟೀಂ ಇಂಡಿಯಾದ ಖ್ಯಾತ ಸ್ಪಿನ್ ಬೌಲರ್ ಅದೇ ತಂಡದ ನಾಯಕನಾಗಿ ಆಯ್ಕೆಗೊಂಡಿದ್ದಾರೆ. 
ಪಂಜಾಬ್ ತಂಡದ ನಾಯಕನಾಗಿ ಆರ್ ಅಶ್ವಿನ್ ಆಯ್ಕೆಯನ್ನು ಪಂಜಾಬ್ ತಂಡ ಖಚಿತಪಡಿಸಿದ್ದು ಪ್ರಸಕ್ತ ಸಾಲಿನ ಟೂರ್ನಿಯಲ್ಲಿ ತಂಡವನ್ನು ಆರ್ ಅಶ್ವಿನ್ ಮುನ್ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. 
ತಮಿಳುನಾಡು ಮೂಲದ ಆಲ್ರೌಂಡರ್ ಆರ್ ಅಶ್ವಿನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದರು. ಆದರೆ ಚೆನ್ನೈ ತಂಡ ಎರಡು ವರ್ಷ ನಿಷೇಧಕ್ಕೊಳಗಾದಾಗ ಪುಣೆ ತಂಡದಲ್ಲಿ ಧೋನಿಗೆ ಜತೆಯಾಗಿದ್ದರು. ಪ್ರಸಕ್ತ ವರ್ಷದಲ್ಲಿ 7.6 ಕೋಟಿ ರುಪಾಯಿಗೆ ಅಶ್ವಿನ್ ಪಂಜಾಬ್ ಪಾಲಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com