ಇನ್ನು ಮಯಾಂಕ್ ಅವರ ಈ ರನ್ ಗಳಿಕೆಯಲ್ಲಿ ಮೂರು ಶತಕ ಹಾಗೂ 4 ಅರ್ಧಶತಕಗಳು ಸೇರಿದ್ದು, ಮಯಾಂಕ್ ಲೀಸ್ಟ್ ‘ಎ’ ಸರಣಿ ಅಥವಾ ಟೂರ್ನಿಯಲ್ಲಿ 700ಕ್ಕೂ ಅಧಿಕ ರನ್ ಗಳಿಸಿದ ಭಾರತದ ಮೊದಲ ದಾಂಡಿಗ ಎನಿಸಿಕೊಂಡಿದ್ದಾರೆ. ಈ ಋತುವಿನ ಎಲ್ಲ ಮಾದರಿ ಕ್ರಿಕೆಟ್‌ನಲ್ಲಿ 2,141 ರನ್ ಗಳಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎಂಬ ಸಾಧನೆ ಮಾಡಿರುವ ಮಯಾಂಕ್ ಲಿಸ್ಟ್ ‘ಎ’ ಟೂರ್ನಿ ಹಾಗೂ ವಿಜಯ್ ಹಜಾರೆ ಟ್ರೋಫಿಯಲ್ಲಿ ಗರಿಷ್ಠ ರನ್ ಗಳಿಸಿದ್ದಲ್ಲದೆ ಗರಿಷ್ಠ ಸಿಕ್ಸರ್ (18)ಗಳನ್ನು ಸಿಡಿಸಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಮಯಾಂಕ್ 109, 84, 28, 102, 89, 140, 81 ಹಾಗೂ 90 ರನ್ ಗಳಿಸಿದ್ದಾರೆ.