ಬುಮ್ರಾ, ಸುಂದರ್‌ಗೆ ಗಾಯ, ಇಂಗ್ಲೆಂಡ್ ಪ್ರವಾಸಕ್ಕೆ ಕೃನಾಲ್, ದೀಪಕ್ ಆಯ್ಕೆ

ಟೀಂ ಇಂಡಿಯಾದ ಬಹು ನಿರೀಕ್ಷಿತ ಇಂಗ್ಲೆಂಡ್ ಪ್ರವಾಸಕ್ಕೂ ಮೊದಲೇ ಕೊಹ್ಲಿ ಪಡೆಗೆ ಆಘಾತ ಎದುರಾಗಿದ್ದು, ತಂಡ ಪ್ರಮುಖ ವೇಗಿಗಳಾದ ಜಸ್ ಪ್ರೀತ್ ಬುಮ್ರಾ...
ದೀಪರ್ ಚಹರ್-ಕೃನಾಲ್ ಪಾಂಡ್ಯ
ದೀಪರ್ ಚಹರ್-ಕೃನಾಲ್ ಪಾಂಡ್ಯ
ನವದೆಹಲಿ: ಟೀಂ ಇಂಡಿಯಾದ ಬಹು ನಿರೀಕ್ಷಿತ ಇಂಗ್ಲೆಂಡ್ ಪ್ರವಾಸಕ್ಕೂ ಮೊದಲೇ ಕೊಹ್ಲಿ ಪಡೆಗೆ ಆಘಾತ ಎದುರಾಗಿದ್ದು, ತಂಡ ಪ್ರಮುಖ ವೇಗಿಗಳಾದ ಜಸ್ ಪ್ರೀತ್ ಬುಮ್ರಾ ಹಾಗೂ ವಾಷಿಂಗ್ಟನ್ ಸುಂದರ್ ಗಾಯಗೊಂಡಿದ್ದು ಇದೀಗ ಅವರ ಸ್ಥಾನಕ್ಕೆ ಕೃನಾಲ್ ಪಾಂಡ್ಯ, ದೀಪಕ್ ಚಹರ್ ಅನ್ನು ಆಯ್ಕೆ ಮಾಡಲಾಗಿದೆ. 
ಐರ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಫುಟ್ಬಾಲ್ ಆಡುವ ವೇಳೆ ಇಬ್ಬರೂ ಆಟಗಾರರು ಗಾಯಮಾಡಿಕೊಂಡಿದ್ದು, ಜಸ್ ಪ್ರೀತ್ ಬುಮ್ರಾ ಕೈ ಬೆರಳು ಮುರಿದಿದ್ದು. ವಾಷಿಂಗ್ಟನ್ ಸುಂದರ್ ಅವರ ಕಾಲಿನ ಹಿಮ್ಮಡಿಗೆ ನೋವಾಗಿದೆ. ಹೀಗಾಗಿ ಈ ಇಬ್ಬರೂ ಆಟಗಾರರು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಹೊರಗುಳಿಯಲಿದ್ದಾರೆ. ಪ್ರಸ್ತುತ ಬುಮ್ರಾ ಇಂಗ್ಲೆಂಡ್ ನಿಂದ ಭಾರತಕ್ಕೆ ವಾಪಸ್ ಆಗಿದ್ದು, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಹೊತ್ತಿಗೆ ಚೇತರಿಸಿಕೊಂಡು ಟೀಂ ಇಂಡಿಯಾ ಸೇರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೂಲಗಳ ಪ್ರಕಾರ ವೈದ್ಯರು ಬುಮ್ರಾಗೆ ಕಡ್ಡಾಯ 3 ವಾರಗಳ ವಿಶ್ರಾಂತಿಗೆ ಸೂಚಿಸಿದ್ದಾರೆ.
ಬುಮ್ರಾ ಮತ್ತು ಸುಂದರ್ ಅನುಪಸ್ಥಿತಿ ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆಯಾಗಿದೆ. ಫಾರ್ಮ್ ನಲ್ಲಿರುವ ಇಬ್ಬರು ಆಟಗಾರರ ಜಾಗವನ್ನು ರಾಜಸ್ಥಾನ ಮೂಲದ ಉದಯೋನ್ಮುಖ ಆಟಗಾರ ದೀಪಕ್ ಚಾಹರ್ ಮತ್ತು ಕೃನಾಲ್ ಪಾಂಡ್ಯ ಸುಂದರ್ ಸ್ಥಾನ ತುಂಬಲಿದ್ದಾರೆ. 
ಇನ್ನು ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆಗಸ್ಟ್ 1ರಂದು ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com