ಭಾರತ ಟೆಸ್ಟ್ ನಲ್ಲಿ ನಂಬರ್ 1 ಸ್ಥಾನ ಪಡೆಯುವಲ್ಲಿ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಮಹೇಂದ್ರಸಿಂಗ್ ಧೋನಿ ಪ್ರಮುಖ ನೆರವು ನೀಡಿದ್ದಾರೆ. ಏಕ ದಿನ ಪಂದ್ಯದಲ್ಲೂ ಪ್ರಮುಖ ಫಿನಿಷರ್ ಕೂಡಾ ಆಗಿದ್ದಾರೆ. ಇಂಗ್ಲೆಂಡ್ ವಿರುದ್ದದ 25 ಪಂದ್ಯಗಳಲ್ಲಿ 882 ರನ್ ಗಳಿಸಿದ್ದಾರೆ. ಐಪಿಎಲ್ ನಲ್ಲಿ ಚನ್ನೈ ಸೂಪರ್ ಕಿಂಗ್ಸ್ ನಾಯಕರಾಗಿದ್ದ ಧೋನಿ, 2019ರ ನಲ್ಲಿ ನಡೆಯಲಿರುವ ವಿಶ್ವಕಪ್ ನಲ್ಲಿ ಇರುತ್ತಾರೆಯೇ ಎಂಬುದನ್ನು ಈ ಪಂದ್ಯಗಳು ನಿರ್ಧರಿಸಲಿವೆ.