ಎಂಎಸ್ ಧೋನಿ ಈ ವರ್ಷ ಎಷ್ಟು ತೆರಿಗೆ ಕಟ್ಟಿದ್ದಾರೆ? ಇಲ್ಲಿದೆ ನೋಡಿ ಮಾಹಿತಿ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಎಸ್ ಧೋನಿ 2017-18ರ ಆರ್ಥಿಕ ವರ್ಷದಲ್ಲಿ ಜಾರ್ಖಂಡ್ ನಲ್ಲಿ ಅತಿ ಹೆಚ್ಚಿನ ಮೊತ್ತದ ವೈಯಕ್ತಿಕ ಆದಾಯ ತೆರಿಗೆ ಪಾವತಿಸಿದ್ದಾರೆ.
ಎಂ.ಎಸ್. ಧೋನಿ
ಎಂ.ಎಸ್. ಧೋನಿ
Updated on

ರಾಂಚಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಎಸ್ ಧೋನಿ 2017-18ರ ಆರ್ಥಿಕ ವರ್ಷದಲ್ಲಿ ಜಾರ್ಖಂಡ್ ನಲ್ಲಿ ಅತಿ ಹೆಚ್ಚಿನ ಮೊತ್ತದ ಆದಾಯ ತೆರಿಗೆ ಪಾವತಿಸಿದ್ದಾರೆ.

ಈ ಬಾರಿ ಎಂಎಸ್ ಧೋನಿ  12. 17 ಕೋಟಿ ರೂ. ಆದಾಯ ತೆರಿಗೆ ಪಾವತಿಸಿದ್ದು, ಬಿಹಾರ ಮತ್ತು  ಜಾರ್ಖಂಡ್  ವಲಯದಲ್ಲಿ ಅತಿ ಹೆಚ್ಚಿನ ಮೊತ್ತದ ತೆರಿಗೆ ಸಲ್ಲಿಸಿದ್ದಾರೆ. 2016-17 ನೇ ಸಾಲಿನಲ್ಲಿ ಪಾವತಿಸಿದ್ದ ಮೊತ್ತಕ್ಕಿಂತಲೂ 1.24 ಕೋಟಿ ಹೆಚ್ಚಿನ ಮೊತ್ತವನ್ನು 2017ರ ಸಾಲಿನಲ್ಲಿ ಅವರು ಪಾವತಿಸಿದ್ದಾರೆ .
ಎಂಎಸ್ ಧೋನಿ 2016-17ರಲ್ಲಿ 10.93 ಆದಾಯ ತೆರಿಗೆ ಪಾವತಿಸಿದ್ದರು. ಆದರೆ., ಆ ವರ್ಷದಲ್ಲಿ ಅತಿ ಹೆಚ್ಚು ತೆರಿಗೆ  ಪಾವತಿದಾರ ಆಗಿರಲಿಲ್ಲ ಎಂದು ಜಾರ್ಖಂಡ್ ವಲಯದ ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತ ವಿ. ಮಹಾಲಿಂಗಂ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com