ಕೊಲಂಬೊ: ಟೀಂ ಇಂಡಿಯಾದ ಆಲ್ರೌಂಡರ್ ವಿಜಯ್ ಶಂಕರ್ ಅವರು ತಮ್ಮನ್ನು ಹಾರ್ದಿಕ್ ಪಾಂಡ್ಯ ಜತೆ ಹೋಲಿಕೆ ಮಾಡಬೇಡಿ ಎಂದು ಹೇಳಿದ್ದಾರೆ.
ಮತ್ತೊಬ್ಬರ ಜತೆ ಹೋಲಿಕೆ ಮಾಡಿ ಈ ಮೂಲಕ ಒತ್ತಡಕ್ಕೆ ಸಿಲುಕಿಕೊಳ್ಳಲು ಬಯಸುವುದಿಲ್ಲ. ಪಂದ್ಯದಿಂದ ಪಂದ್ಯಕ್ಕೆ ನಿರ್ವಹಣೆ ಉತ್ತಮ ಪಡಿಸಿಕೊಳ್ಳಬೇಕೆಂಬ ಹಂಬಲವಿದೆ. ಆದರೆ ಹೆಚ್ಚಿನ ಕ್ರಿಕೆಟಿಗರಂತೆ ನನಗೂ ಹೋಲಿಕೆಗಳು ಇಷ್ಟವಿಲ್ಲ ಎಂದು ಹೇಳಿದ್ದಾರೆ.
ಹಾರ್ದಿಕ್ ಪಾಂಡ್ಯ ಜತೆ ಹೋಲಿಸಿಕೊಂಡರೆ ಒತ್ತಡ ಹೆಚ್ಚುತ್ತದೆ. ಅದಕ್ಕೆ ಬದಲಾಗಿ ನಾನೇನೆಂದು ನಿರೂಪಿಸಲು ಬಯಸುತ್ತೇನೆ ಎಂದು ಹೇಳಿದರು.
ನಿಡಹಾಸ್ ತ್ರಿಕೋನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಪ್ರಮುಖವಾದ ನಾಯಕ ಮಹಮದುಲ್ಲಾ ಮತ್ತು ಮುಶ್ಫಿಕರ್ ರಹೀಂ ವಿಕೆಟ್ ಕಬಳಿಸುವ ಮೂಲಕ ವಿಜಯ್ ಶಂಕರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.