ಕೌಂಟಿ ಕ್ರಿಕೆಟ್ ಆಡಲು ವಿರಾಟ್ ಕೊಹ್ಲಿಗೆ ಅವಕಾಶ ನೀಡಬಾರದು: ಇಂಗ್ಲೆಂಡ್ ಮಾಜಿ ಬೌಲರ್ ಬಾಬ್ ವಿಲ್ಲಿಸ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ಸರಣಿಗೆ ಮೊದಲು ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ನಲ್ಲಿ ಆಡಲು ನಿರ್ಧರಿಸಿದ್ದು, ವಿರಾಟ್ ಕೊಹ್ಲಿಗೆ ಕೌಂಟಿ ಕ್ರಿಕೆಟ್ ಆಡಲು ಅವಕಾಶ ನೀಡಬಾರದು...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on
ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ಸರಣಿಗೆ ಮೊದಲು ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ನಲ್ಲಿ ಆಡಲು ನಿರ್ಧರಿಸಿದ್ದು, ವಿರಾಟ್ ಕೊಹ್ಲಿಗೆ ಕೌಂಟಿ ಕ್ರಿಕೆಟ್ ಆಡಲು ಅವಕಾಶ ನೀಡಬಾರದು ಎಂದು ಇಂಗ್ಲೆಂಡ್ ಮಾಜಿ ಬೌಲರ್ ಬಾಬ್ ವಿಲ್ಲಿಸ್ ಹೇಳಿದ್ದಾರೆ. 
ಕೊಹ್ಲಿ ಕೌಂಟಿ ಕ್ರಿಕೆಟ್ ತಂಡ ಸರ್ರೆ ಪರ ಆಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಕೊಹ್ಲಿಗೆ ಅವಕಾಶ ನೀಡುವುದಕ್ಕೆ ಅಪಸ್ವರವೆತ್ತಿರುವ ಇಂಗ್ಲೆಂಡ್ ಮಾಜಿ ಬೌಲರ್ ಬಾಬ್ ವಿಲ್ಲಿಸ್   ಬೆನ್ನಲ್ಲೇ ಅಪಸ್ವರ ಕೇಳಿ ಬಂದಿದೆ. ಕೊಹ್ಲಿಯಂತಹ ವಿದೇಶೀ ಸ್ಟಾರ್ ಆಟಗಾರರಿಗೆ ಅವಕಾಶ ನೀಡಿರುವುದರಿಂದ ಇಂಗ್ಲೆಂಡ್ ನ ಯುವ ಆಟಗಾರರಿಗೆ ಅವಕಾಶವಿಲ್ಲದಂತಾಗುತ್ತದೆ ಎಂದಿದ್ದಾರೆ.
ಕೊಹ್ಲಿಯಂತಹ ವಿದೇಶಿ ಆಟಗಾರರಿಗೆ ಇಂಗ್ಲೆಂಡ್ ಆಟಕ್ಕೆ ಹೊಂದಿಕೊಳ್ಳುವಂತಹ ಅವಕಾಶ ನೀಡುವುದನ್ನು ನಾನ್ ಸೆನ್ಸ್ ಎಂದೂ ಬಾಬ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com