ಕೊಹ್ಲಿಯನ್ನು ಕೆಣಕದಿರಿ, 'ಸೈಲೆಂಟ್ ಟ್ರೀಟ್ ಮೆಂಟ್' ಕೊಡಿ: ಆಸಿಸ್ ಗೆ ಡು ಪ್ಲೆಸಿಸ್ ಸಲಹೆ

ಮುಂಬರುವ ಭಾರತದ ವಿರುದ್ಧ ಸರಣಿಯಲ್ಲಿ ಯಶಸ್ಸು ನಿಮ್ಮದಾಗಬೇಕು ಎಂದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕೆಣಕದಿರಿ ಎಂದು ದಕ್ಷಿಣ ಆಫ್ರಿಕಾ ಆಟಗಾರ ಫಾಫ್ ಡುಪ್ಲೆಸಿಸ್ ಆಸ್ಟ್ರೇಲಿಯಾ ತಂಡಕ್ಕೆ ಸಲಹೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಮುಂಬರುವ ಭಾರತದ ವಿರುದ್ಧ ಸರಣಿಯಲ್ಲಿ ಯಶಸ್ಸು ನಿಮ್ಮದಾಗಬೇಕು ಎಂದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕೆಣಕದಿರಿ ಎಂದು ದಕ್ಷಿಣ ಆಫ್ರಿಕಾ ಆಟಗಾರ ಫಾಫ್ ಡುಪ್ಲೆಸಿಸ್ ಆಸ್ಟ್ರೇಲಿಯಾ ತಂಡಕ್ಕೆ ಸಲಹೆ ನೀಡಿದ್ದಾರೆ.
ಸ್ಲೆಡ್ಜಿಂಗ್ ಗೆ ಸಂಬಂಧಿಸಿದಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಬಾರಿ ಸ್ಲೆಡ್ಜಿಂಗ್ ರಹಿತ ಟೂರ್ನಿ ಎದುರು ನೋಡುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆಯಾದರೆ, ಕೊಹ್ಲಿ ಮೇಲೆ ಯಾರಿಗೂ ನಂಬಿಕೆ ಬಂದಂತ್ತಿಲ್ಲ ಎಂದು ಕಾಣಿಸುತ್ತದೆ. ಕೊಹ್ಲಿ ಹುಟ್ಟು ಆಕ್ರಮಣಕಾರಿ ಆಟಗಾರ. ಆಸ್ಟ್ರೇಲಿಯಾ ಕೂಡ ಸ್ಲೆಡ್ಜಿಂಗ್ ನಿಂದಾಗಿಯೇ ಕುಖ್ಯಾತಿ ಗಳಿಸಿದೆ. ಅಂತಹುದರಲ್ಲಿ ಭಾರತ ಮತ್ತು ಆಸಿಸ್ ನಡುವೆ ಹೀಗಾಗಿ ಸ್ಲೆಡ್ಜಿಂಗ್ ರಹಿತ ಪಂದ್ಯ ಅಸಾಧ್ಯ ಎಂಬುದು ಕ್ರಿಕೆಟ್ ಪಂಡಿತರ ವಾದ.
ಇದಕ್ಕೆ ಇಂಬು ನೀಡುವಂತೆ ದಕ್ಷಿಣ ಆಫ್ರಿಕಾ ಆಟಗಾರ ಫಾಫ್ ಡುಪ್ಲೆಸಿಸ್ ಕೂಡ ಅದೇ ರೀತಿ ಹೇಳಿಕೆ ನೀಡಿದ್ದು, ಭಾರತ ತಂಡದ ವಿರುದ್ಧ ಆಸ್ಟ್ರೇಲಿಯಾ ಗೆಲುವು ಸಾಧಿಸಬೇಕು ಎಂದರೆ ಯಾವುದೇ ಕಾರಣಕ್ಕೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕೆಣಕಬಾರದು. ಸೈಲೆಂಟ್ ಟ್ರೀಟ್ ಮೂಲಕ ಕೊಹ್ಲಿಯನ್ನು ಶಾಂತವಾಗಿರಿಸಿದರೆ ಮಾತ್ರ ಆಸಿಸ್ ಸರಣಿಯಲ್ಲಿ ಯಶಸ್ಸು ಸಾಧಿಸಬಹುದು ಎಂದು ಹೇಳಿದ್ದಾರೆ.
'ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕೆಲ ಕ್ರಿಕೆಟಿಗರು ಆಕ್ರಮಣಕಾರಿ ಮನೋಭಾವ ಹೊಂದಿದ್ದು, ಪ್ರತೀ ತಂಡದಲ್ಲೂ ಇಂತಹ 2-3 ಆಟಗಾರರಿದ್ದಾರೆ. ಇವರು ಸಮಯಾವಕಾಶಕ್ಕಾಗಿ ಕಾಯುತ್ತಿರುತ್ತಾರೆ, ಅಂತಹ ಕ್ರಿಕೆಟಿಗರ ಪಟ್ಟಿಯಲ್ಲಿ ಕೊಹ್ಲಿ ಕೂಡ ಇದ್ದು, ಆತನನ್ನು ಎಷ್ಟರ ಮಟ್ಟಿಗೆ ಶಾಂತವಾಗಿರಿಸಿದರೆ ಅಷ್ಟು ಒಳ್ಳೆಯದು ಎಂದು ಹೇಳಿದ್ದಾರೆ.
ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲೂ ನಾವು ಇದೇ ಯೋಜನೆ ಪ್ರಯೋಗಿಸಿದ್ದೆವು. ಅದಾಗ್ಯೂ ಕೊಹ್ಲಿ ಸರಣಿಯ ಗರಿಷ್ಟ ಸ್ಕೋರರ್ ಆಗಿದ್ದರು. ಸೆಂಚ್ಯೂರಿಯನ್ ನಂತಹ ನಿಧಾನಗತಿಯ ಪಿಚ್ ನಲ್ಲೇ ಕೊಹ್ಲಿ ಶತಕ ಭಾರಿಸಿದ್ದರು. ಹೀಗಾಗಿ ಕೊಹ್ಲಿಯ ತಂಟೆಗೆ ಹೋಗದಿದ್ದರೆ ಉತ್ತಮ ಎಂದು ಡುಪ್ಲೆಸಿಸ್ ಸಲಹೆ ನೀಡಿದ್ದಾರೆ.
ಇನ್ನು ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ತಂಡ 2-1 ಅಂತರದಲ್ಲಿ ಸರಣಿ ಸೋತರೂ ಕೊಹ್ಲಿ ಸರಣಿಯ ಗರಿಷ್ಟ ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದರು. ಆ ಸರಣಿಯಲ್ಲಿ ಕೊಹ್ಲಿ ಒಟ್ಟು 47.66 ಸರಾಸರಿಯಲ್ಲಿ 286 ರನ್ ಕಲೆ ಹಾಕಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com