ಟೀಂ ಇಂಡಿಯಾದ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಅವರು ಕ್ರಿಕೆಟ್ ಗೆ ವಿದಾಯ ಹೇಳಿದ ಕೊನೆಯ ಪಂದ್ಯ ಅದಾಗಿತ್ತು. ಅಲ್ಲದೆ ಅದು ನನ್ನ 100ನೇ ಟೆಸ್ಟ್ ಪಂದ್ಯ ಸಹ ಆಗಿತ್ತು. ಈ ವೇಳೆ ಮೈದಾನದಿಂದ ಹೊರ ಬಂದ ನಾವು ಟೀಂ ಇಂಡಿಯಾ ಬಸ್ ನಲ್ಲಿ ಕುಳಿತಿದ್ದೇವು. ಆಗ ಧೋನಿ ಬಸ್ ಅನ್ನು ಡ್ರೈವ್ ಮಾಡಿ ಹೋಟೆಲ್ ವರೆಗೂ ಕರೆದೊಯ್ದಿದ್ದರು. ಇದು ನನಗೆ ಮರೆಯಲಾಗದ ಕ್ಷಣ ಎಂದು ಆತ್ಮಕತೆಯಲ್ಲಿ ಲಕ್ಷ್ಮಣ್ ಬರೆದುಕೊಂಡಿದ್ದಾರೆ.