ಕ್ರಿಕೆಟ್

ಸಚಿನ್ ಅವರ ಈ ದಾಖಲೆಯನ್ನೂ ಮುರಿಯುವ ಸನಿಹದಲ್ಲಿ ವಿರಾಟ್ ಕೊಹ್ಲಿ!

ಸಚಿನ್ ಅವರ ಈ ದಾಖಲೆಯನ್ನೂ ಮುರಿಯುವ ಸನಿಹದಲ್ಲಿ ವಿರಾಟ್ ಕೊಹ್ಲಿ!
ಸಂಗ್ರಹ ಚಿತ್ರ
Published On :
ನವದೆಹಲಿ: ಭಾರತದ ಕ್ರಿಕೆಟ್ ದಂತಕಥೆ ಮಾಸ್ಚರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು ವಿಶ್ವದಾಖಲೆಯನ್ನು ವಿರಾಟ್ ಕೊಹ್ಲಿ ಹಿಂಬಾಲಿಸುತ್ತಿದ್ದು, ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಈ ದಾಖಲೆ ಪತನವಾಗುವ ಸಾಧ್ಯತೆ ಇದೆ.
ಹೌದು.. ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿರುವ ಈ ದಾಖಲೆ ಮುರಿಯಲು ಕೊಹ್ಲಿಗೆ ಬೇಕಿರುವುದು ಕೇವಲ 187 ರನ್ ಗಳ ಅವಶ್ಯಕತೆಯಷ್ಟೇ.. ಇಷ್ಟಕ್ಕೂ ಏನಿದು ಸಚಿನ್ ರ ದಾಖಲೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧ ಅತ್ಯಂತ ಕಡಿಮೆ ಪಂದ್ಯಗಳಲ್ಲಿ ಗರಿಷ್ಠ ರನ್ ಮತ್ತು ಗರಿಷ್ಟ ರನ್ ಸರಾಸರಿ ಹೊಂದಿರುವ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅಗ್ರ ಸ್ಥಾನಿಯಾಗಿದ್ದಾರೆ. ಸಚಿನ್ ನಿವೃತ್ತಿಯಾಗಿದ್ದರೂ ಅವರ ಈ ದಾಖಲೆಯನ್ನು ಯಾರೂ ಮುರಿದಿಲ್ಲ. ವಿಂಡೀಸ್ ವಿರುದ್ಧ ಸಚಿನ್ 39 ಏಕದಿನ ಪಂದ್ಯಗಳ ಪೈಕಿ 52.73 ಸರಾಸರಿಯಲ್ಲಿ 1573 ರನ್ ಪೇರಿಸಿದ್ದಾರೆ. ಇದು ಈ ವರೆಗಿನ ವಿಂಡೀಸ್ ವಿರುದ್ಧ ಭಾರತೀಯ ಬ್ಯಾಟ್ಸಮನ್ ನ ಗರಿಷ್ಠ ರನ್ ಗಳಿಕೆ ಮತ್ತು ಗರಿಷ್ಠ ಸರಾಸರಿಯಾಗಿತ್ತು. ಅದೂ ಕೂಡ ಕಡಿಮೆ ಪಂದ್ಯಗಳಲ್ಲಿ. 
ಇದೀಗ ವಿರಾಟ್ ಕೊಹ್ಲಿ ಈ ದಾಖಲೆಯನ್ನು ಹಿಂದಿಕ್ಕುವ ಸನ್ನಾಹದಲ್ಲಿದ್ದು, ಇದಕ್ಕಾಗಿ ಕೊಹ್ಲಿಗೆ ಕೇವಲ 187 ರನ್ ಗಳ ಅವಶ್ಯಕತೆ ಇದೆ. ಡೆಲ್ಲಿ ಡ್ಯಾಶರ್ ಕೊಹ್ಲಿ ಪ್ರಸ್ತುತ ವಿಂಡೀಸ್ ವಿರುದ್ಧ 27 ಏಕದಿನ ಪಂದ್ಯಗಳನ್ನಾಡಿದ್ದು, 60.30 ಸರಾಸರಿಯಲ್ಲಿ 4 ಶತಕ ಹಾಗೂ 9 ಅರ್ಧಶತಕಗಳ ನೆರವಿನಿಂದ 1387 ರನ್ ಪೇರಿಸಿದ್ದಾರೆ. ಇದೇ ಅಕ್ಟೋಬರ್ 21ರಿಂದ ಟೀಂ ಇಂಡಿಯಾ ಕೊಹ್ಲಿ ನೇತೃತ್ವದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಈ ಸರಣಿಯಲ್ಲಿ ಕೊಹ್ಲಿ 187 ರನ್ ಗಳನ್ನು ಗಳಿಸಿದರೆ ಆಗ ಸಚಿನ್ ದಾಖಲೆಯನ್ನು ಕೊಹ್ಲಿ ಹಿಂದಿಕ್ಕಲಿದ್ದಾರೆ.
ಇನ್ನು ಕೆರಿಬಿಯನ್ನರ ವಿರುದ್ಧ ಗರಿಷ್ಠ ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಅಜರುದ್ದೀನ್ ಮತ್ತು ಮಹೇಂದ್ರ ಸಿಂಗ್ ಧೋನಿ ಇದ್ದಾರೆ. ಇವರೊಂದಿಗೆ ಸ್ಫೋಟಕ ಆಟಗಾರ ರೋಹಿತ್ ಶರ್ಮಾ ಕೂಡ ಇದ್ದಾರೆ.
ಈವರೆಗೂ ಕೊಹ್ಲಿ 211 ಏಕದಿನ ಪಂದ್ಯಗಳನ್ನಾಡಿದ್ದು, 58.20 ಸರಾಸರಿಯಲ್ಲಿ 92.12 ಸ್ಟ್ರೈಕ್ ರೇಟ್ ನಲ್ಲಿ 35 ಶತಕಗಳ ನೆರವಿನಿಂದ  9779 ರನ್ ಗಳಿಸಿದ್ದಾರೆ. ಅತೀ ಹೆಚ್ಚು ಶತಕಗಳ ಸಂಖ್ಯೆಯಲ್ಲೂ ಕೊಹ್ಲಿ ಸಚಿನ್ ರನ್ನು ಹಿಂಬಾಲಿಸುತ್ತಿದ್ದ ಸಚಿನ್ ಒಟ್ಟು 49 ಏಕದಿನ ಶತಕಗಳನ್ನು ಗಳಿಸಿ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದರೆ, ಕೊಹ್ಲಿ 35 ಶತಕಗಳ ಮೂಲಕ 2ನೇ ಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.