ಅಂತೆಯೇ ವಿಂಡೀಸ್ ವಿರುದ್ಧ ಅಜೇಯ 157 ರನ್ ಸಿಡಿಸಿದ ಕೊಹ್ಲಿ, ಏಕದಿನದಲ್ಲಿ 4ನೇ 150ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದರು. ಇದಲ್ಲದೆ ಸ್ವದೇಶದಲ್ಲಿ ಕೊಹ್ಲಿ 4 ಸಾವಿರ ರನ್ ಪೂರೈಸಿದ ದಾಖಲೆ ಬರೆದರು. ಅಲ್ಲದೇ ಸ್ವದೇಶದಲ್ಲಿ ವೇಗವಾಗಿ 4 ಸಾವಿರ ರನ್ ಪೂರೈಸಿದ ಭಾರತದ ಮೊದಲ ಕ್ರಿಕೆಟಿಗ ಎಂಬ ಕೀರ್ತಿಗೂ ಕೊಹ್ಲಿ ಭಾಜನರಾದರು. ಈ ಹಿಂದೆ ಸಚಿನ್ 92 ಇನ್ನಿಂಗ್ಸ್ ಗಳಲ್ಲಿ ಭಾರತದಲ್ಲಿ 4 ಸಾವಿರ ರನ್ ಪೂರೈಸಿದ್ದರೆ, ಕೊಹ್ಲಿ ಕೇವಲ 78 ಇನ್ನಿಂಗ್ಸ್ ಗಳಲ್ಲಿ 4 ಸಾವಿರ ರನ್ ಪೂರೈಸಿದ್ದಾರೆ.