ಈ ಓವರ್ ನ ನಂತರದ ಓವರ್ ನಲ್ಲೇ ಮತ್ತೊಂದು ರನ್ಔಟ್ ಗೆ ಪೊವೆಲ್ ಬಲಿಯಾದರು. ಸ್ಟ್ರೇಕ್ ನಲ್ಲಿ ಆಡುತ್ತಿದ್ದ ಸ್ಯಾಮೂಯೆಲ್ಸ್ ಬುಮ್ರಾ ಎಸೆತವನ್ನು ಆಫ್ ಸೈಡ್ ನಲ್ಲಿ ಹೊಡೆದಿದ್ದಾರೆ. ಈ ವೇಳೆ ನಾನ್ ಸ್ಟ್ರೈಕ್ ನಲ್ಲಿದ್ದ ಪೊವೆಲ್ ಹಾಗೂ ಸ್ಯಾಮೂಯೆಲ್ಸ್ ಒಂದು ರನ್ ಪಡೆಯಲು ಮುಂದಾದರೂ ಅಷ್ಟರಲ್ಲಿ ಚೆಂಡು ನೆರವಾಗಿ ಕೊಹ್ಲಿ ಕೈ ಸೇರಿತ್ತು. ಇದನ್ನು ಕಂಡ ಸ್ಯಾಮೂಯೆಲ್ಸ್ ಪೊವೆಲ್ ರನ್ನು ಹಿಂದಕ್ಕೆ ಹೋಗುವಂತೆ ಸೂಚಿಸಿದರು. ಆದರೆ ಕೊಹ್ಲಿ ಅಮೋಘವಾಗಿ ಡೈವ್ ಮಾಡಿ ಚೆಂಡನ್ನು ವಿಕೆಟ್ ಎಸೆದು ರನ್ಔಟ್ ಮಾಡಿದರು.