ಪತಿ ಯಾರೆಂದು ಗುರುತಿಸಿ: ವೈರಲ್ ಆಯ್ತು ವಿರೇಂದ್ರ ಸೆಹ್ವಾಗ್ ಅಪ್ಲೋಡ್ ಮಾಡಿದ್ದ ಫೋಟೋ!

ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅಪ್ಲೋಟ್ ಮಾಡಿದ್ದ ಮಿಂಚುಳ್ಳಿ ಜೋಡಿ ಹಕ್ಕಿಗಳ ಫೋಟೋ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಫೋಟೋ ಕುರಿತಂತೆ ಸೆಹ್ವಾಗ್ ಮಾಡಿರುವ ಹಾಸ್ಯ ಕೂಡ ವೈರಲ್ ಆಗ ತೊಡಗಿದೆ.
ಸೆಹ್ವಾಗ್ ಟ್ವೀಟ್ ಚಿತ್ರ
ಸೆಹ್ವಾಗ್ ಟ್ವೀಟ್ ಚಿತ್ರ
ನವದೆಹಲಿ: ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅಪ್ಲೋಟ್ ಮಾಡಿದ್ದ ಮಿಂಚುಳ್ಳಿ ಜೋಡಿ  ಹಕ್ಕಿಗಳ ಫೋಟೋ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಫೋಟೋ ಕುರಿತಂತೆ ಸೆಹ್ವಾಗ್ ಮಾಡಿರುವ ಹಾಸ್ಯ ಕೂಡ ವೈರಲ್ ಆಗ ತೊಡಗಿದೆ.
ವ್ಯಂಗ್ಯ ಮಾಡುವುದರಲ್ಲಿ ಮತ್ತೊಬ್ಬರ ಕಾಲೆಳೆಯುವುದರಲ್ಲಿ ಸೆಹ್ವಾಗ್ ಎತ್ತಿದ. ಅದೇ ರೀತಿ ಮಿಂಚುಳ್ಳಿ ಜೋಡಿ ಹಕ್ಕಿಗಳ ಫೋಟೋವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿರುವ ಸೆಹ್ವಾಗ್ ಅದಕ್ಕೆ ನೀಡಿರುವ ಶೀರ್ಷಿಕೆ ಕೂಡ ಅವರ ಅಭಿಮಾನಿಗಳ ನಕ್ಕು ನಗಿಸಿದೆ.
ಫೋಟೋದಲ್ಲಿ ಮಿಂಚುಳ್ಳಿ ಜೋಡಿ ಹಕ್ಕಿಗಳು ಕುಳಿತಿದ್ದು, ಈ ಪೈಕಿ ಒಂದು ಹಕ್ಕಿ ಕಿರುಚಾಡುತ್ತಿದೆ. ಮತ್ತೊಂದು ಶಾಂತವಾಗಿದ್ದು, ಇದಕ್ಕೆ ಶೀರ್ಷಿಕೆ ನೀಡಿರುವ ಸೆಹ್ವಾಗ್ ಇದರಲ್ಲಿ ಪತಿ ಯಾರೆಂದು ತಿಳಿಯುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.  ‘ಚಿತ್ರದಲ್ಲಿರುವ ಪಕ್ಷಿಗಳ ಕುರಿತು ನನಗೆ ಹೆಚ್ಚಿನ ಮಾಹಿತಿ ಇಲ್ಲ, ಆದರೆ ಇದರಲ್ಲಿ ಪತಿ ಯಾರೆಂಬುದನ್ನು ಸುಲಭವಾಗಿ ಗುರುತಿಸಬಹುದು’ ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಈ ಫೊಟೊಗೆ ಬರೊಬ್ಬರಿ 31 ಸಾವಿರ ಲೈಕ್, ರಿಟ್ವೀಟ್ ಬಂದಿದ್ದು, ಫೋಟೋ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com