ಈ ಸಾಧನೆ ಮಾಡಿದ ಏಷ್ಯಾದ ಮೊದಲ ಕ್ರಿಕೆಟಿಗ ಎಂಎಸ್ ಧೋನಿ..!

ಇತ್ತೀಚೆಗೆಷ್ಟೇ 200 ಪಂದ್ಯಗಳಿಗೆ ಸಾರಥ್ಯ ವಹಿಸುವ ಮೂಲಕ ದಾಖಲೆ ನಿರ್ಮಾಣ ಮಾಡಿದ್ದ ಭಾರತದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ.
ಮೋರ್ತಾಜಾ ಸ್ಟಂಪೌಟ್ ಮಾಡಿದ ಧೋನಿ
ಮೋರ್ತಾಜಾ ಸ್ಟಂಪೌಟ್ ಮಾಡಿದ ಧೋನಿ
ದುಬೈ: ಇತ್ತೀಚೆಗೆಷ್ಟೇ 200 ಪಂದ್ಯಗಳಿಗೆ ಸಾರಥ್ಯ ವಹಿಸುವ ಮೂಲಕ ದಾಖಲೆ ನಿರ್ಮಾಣ ಮಾಡಿದ್ದ ಭಾರತದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ.
ಬಾಂಗ್ಲಾದೇಶ ಎದುರಿಗಿನ ಫೈನಲ್​ ಪಂದ್ಯದಲ್ಲಿ ಧೋನಿ 800ನೇ ಸ್ಟಂಪ್​ ಔಟ್​ ಮಾಡುವ ಮೂಲಕ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಂತ ಹೆಚ್ಚು ಸ್ಟಂಪ್​ ಔಟ್​ ಮಾಡಿದ ಏಷ್ಯಾದ ಮೊದಲ ಕ್ರಿಕೆಟರ್​ ಎಂಬ ಖ್ಯಾತಿಗೆ ಭಾಜನರಾದರು. ಪಂದ್ಯದ 43ನೇ ಓವರ್​ನಲ್ಲಿ ಕುಲದೀಪ್​ ಯಾದವ್​ ಅವರ ಬೌಲಿಂಗ್​ನಲ್ಲಿ ಮಶ್ರಫೆ ಮೊರ್ತಾಜಾ ಅವರ ಸ್ಟಂಪ್​ ಎಗರಿಸುವ ಮೂಲಕ ಧೋನಿ  ಈ ಸಾಧನೆ ಮಾಡಿದರು.
ಕ್ರಿಕೆಟ್ ​ನ ಮೂರೂ ಪ್ರಕಾರಗಳಾದ ಟೆಸ್ಟ್​, ಏಕದಿನ, ಟಿ20ಯ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಸ್ಟಂಪ್​ ಔಟ್​ ಮಾಡಿದ ವಿಶ್ವದ ವಿಕೆಟ್​ ಕೀಪರ್​ಗಳ ಪಟ್ಟಿಯಲ್ಲಿ ಧೋನಿ ಈಗ ಮೂರನೇ ಸ್ಥಾನದಲ್ಲಿದ್ದಾರೆ. ಧೋನಿ     ಟೆಸ್ಟ್​ ನಲ್ಲಿ  294, ಏಕದಿನದಲ್ಲಿ 419 ಮತ್ತು ಟಿ20ಯಲ್ಲಿ 87 ಸ್ಟಂಪೌಟ್ ಮಾಡಿದ್ದಾರೆ.
ಇನ್ನು 998 ಸ್ಟಂಪ್​ ಎಗರಿಸಿ ದಕ್ಷಿಣ ಆಫ್ರಿಕಾದ ಮಾರ್ಕ್​ ಬೌಚರ್​ ಮೊದಲ ಸ್ಥಾನದಲ್ಲಿದ್ದರೆ, 905 ಸ್ಟಂಪ್​ ಔಟ್​ ಮಾಡುವ ಮೂಲಕ ಆಸ್ಟ್ರೇಲಿಯಾದ ವಿಕೆಟ್​ ಕೀಪರ್​ ಆ್ಯಡಮ್​ ಗಿಲ್​ಕ್ರಿಸ್ಟ್​ ಎರಡನೇ ಸ್ಥಾನದಲ್ಲಿದ್ದಾರೆ.
ಏಷ್ಯಾಕಪ್​ನ ಈ ಟೂರ್ನಿಯಲ್ಲಂತೂ ಧೋನಿ ಅದಾಗಲೇ ಎರಡು ಸಾಧನೆ ಮಾಡಿದ್ದರು. ಒಂದು, ಭಾರತೀಯ ಕ್ರಿಕೆಟರ್​ಗಳ ಪೈಕಿ ಅತ್ಯಂತ ಹೆಚ್ಚು ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಿದ ಆಟಗಾರರ ಪಟ್ಟಿಯಲ್ಲಿ ಧೋನಿ ಎರಡನೇ ಸ್ಥಾನಕ್ಕೇರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com