ಬಿದ್ದಾಗ ಆಳಿಗೊಂದು ಕಲ್ಲು, ಎದ್ದಾಗ ಯಾರು ಮಾತನಾಡುತ್ತಿಲ್ಲ: ಎಬಿ ಡಿವಿಲಿಯರ್ಸ್ ಬೇಸರ!

ಈ ಸಲ ಕಪ್ ನಮ್ದೆ ಅಂತಾ ಭಾವಿಸಿದ್ದ ಅಭಿಮಾನಿಗಳಿಗೆ ಆರ್ಸಿಬಿ ತಂಡ ಸತತ 6 ಪಂದ್ಯಗಳ ಸೋಲುಗಳಿಂದ ದೊಡ್ಡ ಶಾಕ್ ನೀಡಿತ್ತು. ತಂಡ ಸತತ ಸೋಲು ಕಂಡಾಗ ಪ್ರತಿಯೊಬ್ಬರು ತೆಗೆಳುತ್ತಿದ್ದರು.
ವಿರಾಟ್ ಕೊಹ್ಲಿ-ಎಬಿ ಡಿವಿಲಿಯರ್ಸ್
ವಿರಾಟ್ ಕೊಹ್ಲಿ-ಎಬಿ ಡಿವಿಲಿಯರ್ಸ್
Updated on: 
ನವದೆಹಲಿ: ಈ ಸಲ ಕಪ್ ನಮ್ದೆ ಅಂತಾ ಭಾವಿಸಿದ್ದ ಅಭಿಮಾನಿಗಳಿಗೆ ಆರ್ಸಿಬಿ ತಂಡ ಸತತ 6 ಪಂದ್ಯಗಳ ಸೋಲುಗಳಿಂದ ದೊಡ್ಡ ಶಾಕ್ ನೀಡಿತ್ತು. ತಂಡ ಸತತ ಸೋಲು ಕಂಡಾಗ ಪ್ರತಿಯೊಬ್ಬರು ತೆಗೆಳುತ್ತಿದ್ದರು. ಇದೀಗ ಫಿನಿಕ್ಸ್ ಪಕ್ಷಿಯಂತೆ ಎದ್ದು ಬಂದಾಗ ಯಾರೂ ಸಹ ಮಾತನಾಡುತ್ತಿಲ್ಲ ಎಂದು ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಸದ್ಯ 4 ಪಂದ್ಯಗಳಲ್ಲಿ ಗೆಲುವು ಕಾಣುವ ಮೂಲಕ ಟೂರ್ನಿಯಲ್ಲಿ ಪ್ಲೇ ಆಫ್ ಕನಸನ್ನು ಜೀವಂತವಾಗಿಟ್ಟುಕೊಂಡಿದ್ದಾರೆ. ನಮ್ಮ ತಂಡ ಸತತ ಸೋಲು ಕಾಣುತ್ತಿದ್ದಾಗ ಪ್ರತಿಯೊಬ್ಬರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದರು. ಆದರೆ ಇದೀಗ ಹಲವು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದೇವೆ. ಈಗ ಯಾರು ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಆರ್ಸಿಬಿ ತಂಡ ತನ್ನ 12ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಆರ್ಸಿಬಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇನ್ನು 7 ಪಂದ್ಯಗಳನ್ನು ಗೆದ್ದಿರುವ ಡೆಲ್ಲಿ ಅದಾಗಲೇ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com