ರಿಷಭ್ ಪಂತ್ ಸಂದರ್ಶಿಸಿದ ರೋಹಿತ್ ಶರ್ಮಾ: ಬಿಸಿಸಿ 'ನನ್ನನ್ನು ಕಳೆದುಕೊಂಡಿತು' ಎಂದ ಚಹಾಲ್

ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಭಾರತ ಜಯಗಳಿಸಿದ ಬಳಿಕ ಹಿಟ್ ಮ್ಯಾನ್ ರಿಷಭ್ ಪಂತ್ ಅವರನ್ನು ರೋಹಿತ್ ಶರ್ಮಾ ಸಂದರ್ಶಿಸಿದ.....
ಯುಜ್ವೇಂದ್ರ ಚಹಾಲ್
ಯುಜ್ವೇಂದ್ರ ಚಹಾಲ್
Updated on: 
ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಭಾರತ ಜಯಗಳಿಸಿದ ಬಳಿಕ  ರಿಷಭ್ ಪಂತ್ ಅವರನ್ನು ಹಿಟ್ ಮ್ಯಾನ್ ರೋಹಿತ್ ಶರ್ಮಾ ಸಂದರ್ಶಿಸಿದ ಕುರಿತಂತೆ ಟೀಂ ಇಂಡಿಯಾ ಆಟಗಾರ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಹಾಸ್ಯದ ಚಟಾಕಿ ಸಿಡಿಸಿದ್ದಾರೆ.
ಮಂಗಳವಾರ, ಗಯಾನಾದಲ್ಲಿ ನಡೆದ ಪಂದ್ಯದಲ್ಲಿ ಭಾರತ ಜಯಗಳಿಸಿ ಮೂರು ಪಂದ್ಯಗಳ ಸರಣಿಯಲ್ಲಿ ಕ್ಲೀನ್ ಸ್ವೀಪ್  ಮಾಡಿದ್ದು ಆ ಪಂದ್ಯದಲ್ಲಿ ಪಂತ್ ಅಜೇಯ  65 ರನ್ ಗಳಿಸಿದ್ದರು. ಎಡಗೈ ಬ್ಯಾಟ್ಸ್‌ಮನ್ ಕೇವಲ 42 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ ಈ ಸಾಧನೆ ಮಾಡಿದ್ದರು.
ಪಂದ್ಯದ ನಂತರ, ರೋಹಿತ್, ಬಿಸಿಸಿಐ.ಟಿ.ವಿ.ಗಾಗಿ ಪಂತ್ ಅವರನ್ನು ಸಂದರ್ಶಿಸಿದರು ಮತ್ತು ಆ ಸಂದರ್ಶನದ ಕುಇರ್ತಂತೆ ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ವಿವರಣೆಯೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಿದ್ದರು.
ಗಯಾನಾ ಡೈರಿ: ರೋಹಿತ್ ಶರ್ಮಾ ಮತ್ತು ರಿಷಭ್ ಪಂತ್ ಅನ್ ಪ್ಲಗ್ ಎರಡು ಅತಿ ಕಡಿಮೆ ಸ್ಕೋರ್ ಗಳು ಹಾಗೂ ಪಂದ್ಯದ ಗೆಲುವಿಗೆ ಕಾರಣವಾದ ಅರ್ಧಶತಕ ಪಂತ್ ಅಂತಿಮ ಟಿ20 ಯನ್ನು ಹೇಗೆ ಗೆಲ್ಲಲು ಕಾರಣವಾದರೆಂದು ಹಿಟ್ ಮ್ಯಾನ್ ಕಂಡುಕೊಂಡಿದ್ದಾರೆ- ಅವರು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಉತ್ತರಿಸಿದ ಚಹಾಲ್ ಲೆಗ್-ಸ್ಪಿನ್ನರ್ ತನ್ನ ಪ್ರಸಿದ್ಧ 'ಚಹಲ್ ಟಿವಿ'ಯನ್ನು ಉಲ್ಲೇಖಿಸುತ್ತಾ "ಬಿಸಿಸಿಐ ನನ್ನನ್ನು ಕಳೆದುಕೊಂಡಿದೆ" ಎಂದಿದ್ದಾರೆ, ಚಹಾಲ್ ಈ ಮುನ್ನ ಬಿಸಿಸಿಐಗಾಗಿ ತಂಡದ ಆಟಗಾರರನ್ನು ಸಂದರ್ಶಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com