ಕ್ರಿಕೆಟ್

ಮೂರನೇ ಟೆಸ್ಟ್‌ ಡ್ರಾ: 2-0 ಅಂತರದಲ್ಲಿ ಟೆಸ್ಟ್‌ ಸರಣಿ ಗೆದ್ದ ಭಾರತ(ಎ)

ಭಾರತ(ಎ) ಹಾಗೂ ವೆಸ್ಟ್‌ ಇಂಡೀಸ್‌(ಎ) ತಂಡಗಳ ನಡುವಿನ ಮೂರನೇ ಅನಧಿಕೃತ ಟೆಸ್ಟ್‌ ಪಂದ್ಯ ಅಂತಿಮವಾಗಿ ಡ್ರಾ ಆಯಿತು. ಕಳೆದ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಭಾರತ 2-0 ಅಂತರದಲ್ಲಿ ಟೆಸ್ಟ್‌ ಸರಣಿ ತನ್ನದಾಗಿಸಿಕೊಂಡಿತು.

ಮೂರನೇ ಟೆಸ್ಟ್‌ ಡ್ರಾ: 2-0 ಅಂತರದಲ್ಲಿ ಟೆಸ್ಟ್‌ ಸರಣಿ ಗೆದ್ದ ಭಾರತ(ಎ)
Published On :

ಟ್ರಿನಿಡಾಡ್‌: ಭಾರತ(ಎ) ಹಾಗೂ ವೆಸ್ಟ್‌ ಇಂಡೀಸ್‌(ಎ) ತಂಡಗಳ ನಡುವಿನ ಮೂರನೇ ಅನಧಿಕೃತ ಟೆಸ್ಟ್‌ ಪಂದ್ಯ ಅಂತಿಮವಾಗಿ ಡ್ರಾ ಆಯಿತು. ಕಳೆದ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಭಾರತ 2-0 ಅಂತರದಲ್ಲಿ ಟೆಸ್ಟ್‌ ಸರಣಿ ತನ್ನದಾಗಿಸಿಕೊಂಡಿತು.  

ಇಲ್ಲಿನ ಬ್ರಿಯನ್‌ ಲಾರ ಕ್ರೀಡಾಂಗಣದಲ್ಲಿ ವಿಕೆಟ್‌ ನಷ್ಟವಿಲ್ಲದೆ 37 ರನ್‌ಗಳಿಂದ ದ್ವಿತೀಯ ಇನಿಂಗ್ಸ್‌ ಮುಂದುವರಿಸಿದ ವೆಸ್ಟ್‌ ಇಂಡೀಸ್‌(ಎ) ನಾಲ್ಕನೇ ಹಾಗೂ ಅಂತಿಮ ದಿನದ ಮುಕ್ತಾಯಕ್ಕೆ 109 ಓವರ್‌ಗಳಿಗೆ ಆರು ವಿಕೆಟ್‌ ನಷ್ಟಕ್ಕೆ 314 ರನ್‌ ಗಳಿಸಿತು. ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು. 

ಶುಕ್ರವಾರ ಬ್ಯಾಟಿಂಗ್‌ ಆರಂಭಿಸಿದ ವೆಸ್ಟ್‌ ಇಂಡೀಸ್‌(ಎ)  ಗೆಲುವಿಗೆ 336 ರನ್‌ ಅಗತ್ಯವಿತ್ತು. ಬ್ಯಾಟಿಂಗ್‌ಗೆ ಇಳಿದ ಮೊಟ್ಸಿನ್‌ ಹಾಡ್ಜ್‌ ಹಾಗೂ ಜೆರೆಮಿ ಸೊಲೊಜನೊ ಜೋಡಿಯು ಮುರಿಯದ ಮೊದಲನೇ ವಿಕೆಟ್‌ಗೆ 68 ರನ್‌ ಜತೆಯಾಟವಾಡಿತು. ಮೊಟ್ಸಿನ್‌ ಹಾಡ್ಜ್‌ ಅವರು ಕೇವಲ 25 ರನ್‌ ಗಳಿಗೆ ಸೀಮಿತರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.