ಆಸ್ಪತ್ರೆಯ ಬೆಡ್ ಮೇಲೆ ಸುರೇಶ್‌ ರೈನಾ: ಮನಮುಟ್ಟುವ ಟ್ವೀಟ್ ಮಾಡಿದ ಜಾಂಟಿ ರೋಡ್ಸ್!

ಹಿರಿಯ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ ಅವರು ಶುಕ್ರವಾರ ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್ ಮನಮುಟ್ಟುವ ಟ್ವೀಟ್ ಮಾಡಿದ್ದಾರೆ.
ಆಸ್ಪತ್ರೆಯ ಬೆಡ್ ಮೇಲೆ ಸುರೇಶ್‌ ರೈನಾ: ಮನಮುಟ್ಟುವ ಟ್ವೀಟ್ ಮಾಡಿದ ಜಾಂಟಿ ರೋಡ್ಸ್!
Updated on

ಆ್ಯಮಸ್ಟರ್‌ಡ್ಯಾಮ್‌: ಹಿರಿಯ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ ಅವರು ಶುಕ್ರವಾರ ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್ ಮನಮುಟ್ಟುವ ಟ್ವೀಟ್ ಮಾಡಿದ್ದಾರೆ. 

ವಿಶೇಷವಾಗಿ ಈ ಕೊನೆಯ ಕೆಲವು ವರ್ಷಗಳಲ್ಲಿ ನಿಮ್ಮ ನಂಬಲಾಗದ ಕೆಲಸದೊಂದಿಗೆ ನೀವು ಅನೇಕರಿಗೆ ಸ್ಫೂರ್ತಿಯಾಗಿದ್ದೀರಿ. ಈಗ ನಿಮ್ಮ ದೇಹದ ಬಗ್ಗೆ ಗಮನ ವಹಿಸಿ,, ನನ್ನ ಸ್ನೇಹಿತ - ನನಗೆ ಗೊತ್ತು, ನಿಮ್ಮನ್ನು ಬಿಟ್ಟರೆ ನಾಳೆಯೇ ತರಬೇತಿ ಪಡೆಯಲು ಬಯಸುತ್ತೀರಿ ಎಂದು ಜಾಂಟಿ ರೋಡ್ಸ್ ಬರೆದುಕೊಂಡಿದ್ದಾರೆ. 

ಕಳೆದ ಹಲವು ತಿಂಗಳುಗಳಿಂದ ಗಾಯದಿಂದ ಬಳಲುತ್ತಿದ್ದ ಸುರೇಶ್‌ ರೈನಾ ಅವರು ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಅವರು ಚೇತರಿಸಿಕೊಳ್ಳಲು ನಾಲ್ಕರಿಂದ ಆರು ವಾರಗಳ ಸಮಯ ಅಗತ್ಯವಿದೆ. ಹೀಗಾಗಿ ಮುಂಬರುವ ದೇಶೀಯ ಆವೃತ್ತಿಯ ಹೆಚ್ಚಿನ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ಬಿಸಿಸಿಐ ಟ್ವೀಟ್‌ ಮಾಡಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com