ಆಸಿಸ್ ನೆಲದಲ್ಲಿ ಕಾಂಗರೂಗಳನ್ನು ಮಣ್ಣುಮುಕ್ಕುಸುವ ತಾಕತ್ತು ಈ ತಂಡಕ್ಕೆ ಮಾತ್ರ ಇದೆ: ಮೈಕೆಲ್ ವಾನ್

ತನ್ನ ನೆಲದಲ್ಲೇ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವ ತಾಕತ್ತು ಈ ತಂಡಕ್ಕೆ ಮಾತ್ರವಿದೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಲಂಡನ್: ತನ್ನ ನೆಲದಲ್ಲೇ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವ ತಾಕತ್ತು ಈ ತಂಡಕ್ಕೆ ಮಾತ್ರವಿದೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಹೇಳಿದ್ದಾರೆ.

ನ್ಯೂಜಿಲೆಂಡ್ ತಂಡದ ಆಸ್ಟ್ರೇಲಿಯಾ ಪ್ರವಾಸ ಕಿವೀಸ್ ಗಳಿಗೆ ಕಬ್ಬಿಣದ ಕಡಲೆಯಾಗಿದ್ದು, ಮೊದಲ ಟೆಸ್ಟ್ ಪಂದ್ಯದಲ್ಲೇ ಕಿವೀಸ್ ದಾಂಡಿಗರು ಆಸಿಸ್ ಬೌಲರ್ ಗಳ ಎದುರು ರನ್ ಗಳಿಸಲು ತಿಣುಕಾಡುತ್ತಿದ್ದಾರೆ. ಆಸಿಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಕಿವೀಸ್ ಪಡೆ ಕೇವಲ 166 ರನ್ ಗಳಿಗೆ ಆಲೌಟ್ ಆಗಿದೆ.

ನ್ಯೂಜಿಲೆಂಡ್ ತಂಡದ ಪ್ರದರ್ಶನ ಇದೀಗ ಮಾಜಿ ಹಿರಿಯ ಕ್ರಿಕೆಟಿಗರ ಕೆಂಗಣ್ಣಿಗೆ ಕಾರಣವಾಗಿದ್ದು, ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಆಟಗಾರ , ಆಸಿಸ್ ನೆಲದಲ್ಲಿ ಅದರದ್ದೇ ತಂಡವನ್ನು ಸೋಲಿಸುವ ತಾಕತ್ತು ಟೀಂ ಇಂಡಿಯಾಗೆ ಮಾತ್ರ ಇದೆ. ಆಸಿಸ್ ವಾತಾವರಣದಲ್ಲಿ ಟೀಂ ಇಂಡಿಯಾ ಆಟಗಾರರು ಉತ್ತಮ ಹೋರಾಟ ನೀಡಬಲ್ಲರು ಎಂದು ಮೈಕೆಲ್ ವಾನ್ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬ್ರೆಂಡನ್ ಮೆಕ್ಕಲಮ್ ಟ್ರೆಂಟ್ ಬೌಲ್ಟ್ ಕಮ್ ಬ್ಯಾಕ್ ಮಾಡಿದರೆ ಕಿವೀಸ್ ಪಡೆ ತಿರುಗಿಬೀಳುವ ಸಾಧ್ಯತೆ ಇದೆ. ಈ ಪಂದ್ಯ ಸೋತರೂ ಸರಣಿಯಲ್ಲಿ ಕಿವೀಸ್ ಪಡೆ ಖಂಡಿತಾ ಕಮ್ ಬ್ಯಾಕ್ ಮಾಡಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಂತೆಯೇ ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಮಾರ್ಕ್ ವಾ, ಕಿವೀಸ್ ಪಡೆಯಲ್ಲಿ ಉತ್ತಮ ಸ್ಪಿನ್ ಪಡೆ ಇಲ್ಲದೇ ಇರುವುದು ಆ ತಂಡಕ್ಕೆ ಹಿನ್ನಡೆಯಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com