ಒಂದು ಹೆಜ್ಜೆ ಇಟ್ಟಿದ್ದರೆ ಸುಲಭ ರನೌಟ್, ಮಿಸ್ ಮಾಡಿ ತಲೆ ಮೇಲೆ ಕೈಯಿಟ್ಟುಕೊಂಡ ಬೌಲರ್, ವಿಡಿಯೋ ವೈರಲ್!

ಕ್ರಿಕೆಟ್ ನಲ್ಲಿ ಫನ್ನಿ ಘಟನೆಗಳು ನಿರಂತರವಾಗಿ ನಡೆಯುತ್ತಲೆ ಇರುತ್ತದೆ. ಹೌದು ಒಂದು ಹೆಜ್ಜೆ ಇಟ್ಟಿದ್ದರೆ ಸುಲಭವಾಗಿ ರನೌಟ್ ಮಾಡಬಹುದಿತ್ತು. ಆದರೆ ಬೌಲರ್ ಎಡವಟ್ಟಿನಿಂದ ರನೌಟ್ ಮಿಸ್ ಆಗಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ರನೌಟ್ ಮಿಸ್ ದೃಶ್ಯ
ರನೌಟ್ ಮಿಸ್ ದೃಶ್ಯ
Updated on

ಕ್ರಿಕೆಟ್ ನಲ್ಲಿ ಫನ್ನಿ ಘಟನೆಗಳು ನಿರಂತರವಾಗಿ ನಡೆಯುತ್ತಲೆ ಇರುತ್ತದೆ. ಹೌದು ಒಂದು ಹೆಜ್ಜೆ ಇಟ್ಟಿದ್ದರೆ ಸುಲಭವಾಗಿ ರನೌಟ್ ಮಾಡಬಹುದಿತ್ತು. ಆದರೆ ಬೌಲರ್ ಎಡವಟ್ಟಿನಿಂದ ರನೌಟ್ ಮಿಸ್ ಆಗಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. 

2019ರ ರಣಜಿ ಟ್ರೋಫಿಯಲ್ಲಿ ಮಧ್ಯಪ್ರದೇಶ ಮತ್ತು ತಮಿಳುನಾಡು ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಮಧ್ಯಪ್ರದೇಶದ ಬ್ಯಾಟ್ಸ್ ಮನ್ ಮಿಹಿರ್ ಹಿರ್ವಾನಿ ಅವರು ಅದೃಷ್ಟ ಎಂಬಂತೆ ಪಾರಾಗಿದ್ದಾರೆ.

ಅವೇಶ್ ಅವರು ತಮಿಳುನಾಡಿನ ಬೌಲರ್ ವಿಘ್ನೇಶ್ ಬೌಲಿಂಗ್ ನಲ್ಲಿ ಲೆಗ್ ಸೈಡ್ ನಲ್ಲಿ ಚೆಂಡನ್ನು ಬಾರಿಸಿದರು. ಸಿಂಗಲ್ ತೆಗೆದುಕೊಂಡ ನಂತರ ಮತ್ತೊಂದು ರನ್ ತೆಗೆದುಕೊಳ್ಳುವಾಗ ಮಿಹಿರ್ ಕ್ರಿಸ್ ಮಧ್ಯಕ್ಕೆ ಬರುವಷ್ಟರಲ್ಲೇ ಚೆಂಡು ಬೌಲರ್ ಕೈಸೇರಿತ್ತು. ಈ ವೇಳೆ ವಿಘ್ನೇಸ್ ನಿಂತಲ್ಲಿಂದಲೇ ವಿಕೆಟ್ ಗೆ ಹೊಡೆಯಲು ಮುಂದಾಗಿದ್ದು ಅದು ಮಿಸ್ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com