ಪಾಂಡ್ಯಾ, ಕೆಎಲ್ ರಾಹುಲ್ ಅಸಭ್ಯ ಹೇಳಿಕೆ ವಿವಾದ: ನಾಯಕ ವಿರಾಟ್ ಕೊಹ್ಲಿ ಹೇಳಿದ್ದು?

ಇಡೀ ಕ್ರಿಕೆಟ್ ಲೋಕವನ್ನೇ ದಂಗು ಬಡಿಸಿರುವ ಹಾರ್ದಿಕ್ ಪಾಂಡ್ಯಾ ಮತ್ತು ಕೆಎಲ್ ರಾಹುಲ್ ಅವರ ಅಸಭ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೊನೆಗೂ ಮೌನ ಮುರಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಸಿಡ್ನಿ: ಇಡೀ ಕ್ರಿಕೆಟ್ ಲೋಕವನ್ನೇ ದಂಗು ಬಡಿಸಿರುವ ಹಾರ್ದಿಕ್ ಪಾಂಡ್ಯಾ ಮತ್ತು ಕೆಎಲ್ ರಾಹುಲ್ ಅವರ ಅಸಭ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೊನೆಗೂ ಮೌನ ಮುರಿದ್ದಾರೆ.
ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಸಜ್ಜಾಗುತ್ತಿರುವ ನಾಯಕ ವಿರಾಟ್ ಕೊಹ್ಲಿ ಮಾಧ್ಯಮಗಳೊಂದಿಗೆ ಈ ಬಗ್ಗೆ ಮಾತನಾಡಿದ್ದು, ನಾನೂ ಕೂಡ ಪಾಂಡ್ಯಾ ಮತ್ತು ರಾಹುಲ್ ವಿಚಾರದ ಬಗ್ಗೆ ಕೇಳಿದ್ದೇನೆ. ಆದರೆ ಅದು ಅವರ ವೈಯುಕ್ತಿಕ ಅಭಿಪ್ರಾಯಗಳಷ್ಟೇ.. ಕ್ರಿಕೆಟ್ ಗೂ ಅವರ ಹೇಳಿಕೆಗೂ ಸಂಬಂಧವಿಲ್ಲ. ಆದರೆ ನಾವು ಕ್ರಿಕೆಟಿಗರು ಒಂದು ದೇಶವನ್ನು ಪ್ರತಿನಿಧಿಸುತ್ತಿದ್ದೇವೆ ಎಂದಾಗ ನಮ್ಮ ಮಾತಿನ ಮೇಲೆ ನಿಗಾ ಇರಬೇಕು. ನಾವಾಡುವ ಪ್ರತೀಮಾತಿಗೂ ನಾವೇ ಜವಾಬ್ದಾರರು ಎಂದು ಹೇಳಿದ್ದಾರೆ.
ಅಂತೆಯೇ ಪ್ರಕರಣಕ್ಕೆ ಸಂಬಂಧಸಿದಂತೆ ಬಿಸಿಸಿಐ ಕೈಗೊಳ್ಳುವ ನಿರ್ಧಾರಕ್ಕೆ ನಾವು ಕೂಡ ಕಾಯುತ್ತಿದ್ದೇವೆ. ತಂಡದ ದೃಷ್ಟಿಕೋನದಲ್ಲಿ ನೋಡುವುದಾದರೆ ಹಾಲಿ ವಿವಾದದಿಂದ ತಂಡದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಪ್ರಕರಣದಿಂದ ತಂಡದ ಸ್ಪೂರ್ತಿಗೆ ಧಕ್ಕೆಯಾಗುವುದಿಲ್ಲ. ಬಿಸಿಸಿಐ ನಿರ್ಧಾರ ಹೊರ ಬಿದ್ದ ಬಳಿಕ ತಂಡದ ಅಂತಿಮ ಆಯ್ಕೆ ಮಾಡುತ್ತೇವೆ ಎಂದು ಕೊಹ್ಲಿ ಹೇಳಿದ್ದಾರೆ.
ಅಂತೆಯೇ ಒಂದು ವೇಳೆ ಪಾಂಡ್ಯಾ ವಿರುದ್ಧ ಬಿಸಿಸಿಐ ನಿಷೇಧ ಹೇರಿದರೆ ರವೀಂದ್ರ ಜಡೇಜಾ ಆಯ್ಕೆ ಕೂಡ ನಮ್ಮ ಮುಂದಿದೆ ಎಂದು ಕೊಹ್ಲಿ ಹೇಳಿದ್ದಾರೆ.
ಇನ್ನು ಈ ಹಿಂದೆ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಾರ್ದಿಕ್ ಪಾಂಡ್ಯಾ ಹಾಗೂ ಕೆಎಲ್ ರಾಹುಲ್ ಮಹಿಳೆಯರ ಕುರಿತು ಅಸಭ್ಯ ಹೇಳಿಕೆ ನೀಡಿದ್ದರು. ಇದಕ್ಕೆ ತೀವ್ರ ಆಕ್ರೋಶ ಕೂಡ ವ್ಯಕ್ತವಾಗಿ ಬಿಸಿಸಿಐ ಕ್ರಿಕೆಟಿಗರಿಂದ ಸ್ಪಷ್ಟನೆ ಕೇಳಿತ್ತು. ಅಂತೆಯೇ ಹಾರ್ದಿಕ್ ಪಾಂಡ್ಯಾ ಕೂಡ ತಮ್ಮ ಹೇಳಿಕೆಗೆ ಟ್ವಿಟರ್ ನಲ್ಲಿ ಮತ್ತು ಬಿಸಿಸಿಐಗೆ ನೀಡಿದ್ದ ಸ್ಪಷ್ಟನೆಯಲ್ಲಿ ಕ್ಷಮೆ ಕೇಳಿದ್ದರು, ಮತ್ತೆ ಇದು ಪುನಾರಾವರ್ತನೆಯಾಗುವುದಿಲ್ಲ ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com