'ಭುವಿ'ಯ ಆ ಎರಡು ಎಸೆತ, ಧೋನಿ ಬ್ಯಾಟಿಂಗ್ ಇಡೀ ಪಂದ್ಯದ ಹೈಲೈಟ್: ವಿರಾಟ್ ಕೊಹ್ಲಿ

ಆಸಿಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಬೌಲಿಂಗ್ ಹಾಗೂ ಎಂಎಸ್ ಧೋನಿ ಬ್ಯಾಟಿಂಗ್ ಪ್ರಮುಖವಾಗಿತ್ತು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಅಡಿಲೇಡ್: ಆಸಿಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಬೌಲಿಂಗ್ ಹಾಗೂ ಎಂಎಸ್ ಧೋನಿ ಬ್ಯಾಟಿಂಗ್ ಪ್ರಮುಖವಾಗಿತ್ತು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಅವರು, ಬ್ಯಾಟಿಂಗ್ ನಲ್ಲಿ ಆಸಿಸ್ ತಂಡ ಅತ್ಯುತ್ತಮವಾಗಿತ್ತು. ಆಸಿಸ್ ತಂಡವನ್ನು ನಿಯಂತ್ರಿಸಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಆದರೆ ಭುವನೇಶ್ವರ್ ಎಸೆದ ಆ ಎರಡು ಎಸೆತಗಳು ಆಸಿಸ್ ತಂಡ 300ರ ಗಡಿ ದಾಟದಂತೆ ನಿಯಂತ್ರಿಸಿತು. ಆ ಎರಡು ಎಸೆತಗಳಲ್ಲಿ ಶತಕ ಸಿಡಿಸಿದ್ದ ಶಾನ್ ಮಾರ್ಷ್, ಆರ್ಧಶತಕಕದ ಹೊಸ್ತಿಲಲ್ಲಿದ್ದ ಮ್ಯಾಕ್ಸಿ ಔಟ್ ಆದರು. ಇದು ಭಾರತ ತಂಡ ಮೇಲುಗೈ ಸಾಧಿಸುವಂತೆ ಮಾಡಿತು. 
ಹಾಗೆಂದ ಮಾತ್ರಕ್ಕೆ ನಾವು 330 ರನ್ ಗಳ ಗುರಿ ಬೆನ್ನಟ್ಟಲು ಸಾಧ್ಯವಿಲ್ಲ ಎಂದಲ್ಲ. ಆದರೆ ಆಸಿಸ್ ತಂಡವನ್ನು ಆದಷ್ಟು ಕಡಿಮೆ ರನ್ ಗಳಿಗೆ ನಿಯಂತ್ರಿಸುವುದು ನಮ್ಮ ಯೋಜನೆಯಾಗಿತ್ತು. ಅದರಲ್ಲಿ ಯಶಸ್ವಿ ಕೂಡ ಆದೆವು. ಅಂತೆಯೇ ಎಂಎಸ್ ಧೋನಿ ಬ್ಯಾಟಿಂಗ್ ಮತ್ತು ಮ್ಯಾಚ್ ಫಿನಿಷಿಂಗ್ ಅದ್ಭುತವಾಗಿತ್ತು. ಧೋನಿ ಜೊತೆ ಬ್ಯಾಟ್ ಮಾಡುವಾಗ ಒತ್ತಡ ಕಡಿಮೆ ಇರುತ್ತದೆ. ತಂಡದ ಗೆಲುವಿನಲ್ಲಿ ನಮ್ಮದೂ ಪಾತ್ರವಿದ್ದರೆ ಅದರ ಖುಷಿಯೇ ಬೇರೆ. ಅಂತಿಮ ಓವರ್ ನಲ್ಲಿ ಧೋನಿ ಬ್ಯಾಟಿಂಗ್ ಅವರ ಆರಂಭದ ದಿನಗಳನ್ನು ನೆನಪಿಸಿತು. ಬ್ಯಾಟಿಂಗ್ ವೇಳೆ ಅವರನ್ನು ಯಾರೂ ಗೆಸ್ ಮಾಡಲು ಸಾಧ್ಯವಿಲ್ಲ. ನಿಜಕ್ಕೂ ಅವರ ಆಟಕ್ಕೆ ಅವರೇ ಸಾಟಿ. ಅವರಿಗೆ ದಿನೇಶ್ ಕಾರ್ತಿಕ್ ಉತ್ತಮ ಸಾಥ್ ನೀಡಿದರು. ಇಂದಿನ ಗೆಲುವು ತಂಡಕ್ಕೆ ವಿಶೇಷವಾದದ್ದು ಎಂದು ಕೊಹ್ಲಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com