ಎಂಎಸ್ ಧೋನಿ
ಕ್ರಿಕೆಟ್
ಧೋನಿ ಓರ್ವ ಸೂಪರ್‌ಸ್ಟಾರ್ ಮತ್ತು ಸಾರ್ವಕಾಲಿಕ ಶ್ರೇಷ್ಠ ಆಟಗಾರ: ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್
ಟೀಂ ಇಂಡಿಯಾ ಆಸೀಸ್ ನೆಲದಲ್ಲಿ ಐತಿಹಾಸಿಕ ಏಕದಿನ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಾಜಿ ನಾಯಕ ಎಂಎಸ್ ಧೋನಿ ಕುರಿತಂತೆ ಎಲ್ಲೆಡೆಯಿಂದ...
ಮೆಲ್ಬರ್ನ್: ಟೀಂ ಇಂಡಿಯಾ ಆಸೀಸ್ ನೆಲದಲ್ಲಿ ಐತಿಹಾಸಿಕ ಏಕದಿನ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಾಜಿ ನಾಯಕ ಎಂಎಸ್ ಧೋನಿ ಕುರಿತಂತೆ ಎಲ್ಲೆಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದ್ದು ಇನ್ನು ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್ ಅವರು ಧೋನಿ ಓರ್ವ ಸೂಪರ್‌ಸ್ಟಾರ್ ಮತ್ತು ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿ ನಿರ್ಣಾಯಕ ಹಾಗೂ ಮೂರನೇ ಏಕದಿನ ಪಂದ್ಯದಲ್ಲಿ ಧೋನಿ 114 ಎಸೆತಗಳಲ್ಲಿ 87 ರನ್ ಸಿಡಿಸಿದ್ದರು. ಇನ್ನು ಧೋನಿಗೆ ಉತ್ತಮ ಸಾಥ್ ನೀಡಿದ ಕೇದಾರ್ ಜಾದವ್ ಸಹ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಪರಿಣಾಮ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 7 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿತ್ತು.
ಆಸ್ಟ್ರೇಲಿಯಾ ನೆಲದಲ್ಲಿ ಏಕದಿನ ಸರಣಿ ಗೆದ್ದ ಭಾರತ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಆಸೀಸ್ ಕೋಚ್ ಜಸ್ಟಿಂಗ್ ಲ್ಯಾಂಗರ್ ಅವರು 37ರ ಹರೆಯದ ಧೋನಿ ಈ ವಯಸ್ಸಿನಲ್ಲೂ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಪ್ರಶಂಸಿಸಿದ್ದಾರೆ.
ಈ ವಯಸ್ಸಿನಲ್ಲೂ ಧೋನಿ ಒಳ್ಳೆ ಯುವಕನಂತೆ ಓಡುವ ಸಾಮರ್ಥ್ಯ ಹೊಂದಿದ್ದಾರೆ. ಅವರ ದೈಹಿಕ ಸಾಮರ್ಥ್ಯ ಉತ್ಕೃಷ್ಟವಾಗಿದೆ ಎಂದು ಲ್ಯಾಂಗರ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ