ಜಗತ್ತಿನಲ್ಲೇ ಇದು ಅದ್ಭುತ ಕ್ಯಾಚ್ ಪ್ರಯತ್ನ; ಟ್ವೀಟರಿಗರು ಫಿದಾ, ವಿಡಿಯೋ ವೈರಲ್!

ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಬರುವ ಅಭಿಮಾನಿಗಳು ಕೆಲವೊಮ್ಮೆ ಕ್ರೀಡಾಂಗಣದಲ್ಲಿ ಬರುವ ಚೆಂಡನ್ನು ಕ್ಯಾಚ್ ಹಿಡಿಯುವ ಮೂಲಕ ಅಚ್ಚರಿ ಮೂಡಿಸುತ್ತಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಬರುವ ಅಭಿಮಾನಿಗಳು ಕೆಲವೊಮ್ಮೆ ಕ್ರೀಡಾಂಗಣದಲ್ಲಿ ಬರುವ ಚೆಂಡನ್ನು ಕ್ಯಾಚ್ ಹಿಡಿಯುವ ಮೂಲಕ ಅಚ್ಚರಿ ಮೂಡಿಸುತ್ತಾರೆ. ಆದರೆ ಇಲ್ಲೊಬ್ಬ ಅಭಿಮಾನಿ ದೊಡ್ಡ ಸಾಹಸ ಮಾಡಿ ಕ್ಯಾಚ್ ಹಿಡಿಯುವ ಪ್ರಯತ್ನ ಮಾಡಿದ್ದು ಆತನ ಪ್ರಯತ್ನಕ್ಕೆ ಟ್ವೀಟರಿಗರು ಭೇಷ್ ಎಂದಿದ್ದಾರೆ. 
ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್ ನಲ್ಲಿ ಬ್ರಿಸ್ಬೇನ್ ಹಿಟ್ ತಂಡದ ಬ್ಯಾಟ್ಸ್ ಮನ್ ಕ್ರಿಸ್ ಲೇನ್ ಭರ್ಜರಿ ಸಿಕ್ಸರ್ ಸಿಡಿಸುತ್ತಾರೆ. ಈ ವೇಳೆ ಚೆಂಡು ಡಿಸ್ ಪ್ಲೇಯ್ ಹಿಂಬದಿ ಹಾಕಿದ್ದ ಶಾಮೀಯಾನದ ಬಿಳುತ್ತದೆ.
ಚೆಂಡು ಬರುತ್ತಿದ್ದುದ್ದನ್ನು ಕಂಡ ಕ್ರಿಕೆಟ್ ಅಭಿಮಾನಿಯೊಬ್ಬ ತಾನು ಕುಳಿತಿದ್ದ ಚೇರನ್ನು ಬಿಟ್ಟು ಶಾಮೀಯಾನದ ಮೇಲೆ ಬಂದು ಕ್ಯಾಚ್ ಹಿಡಿಯಲು ಪ್ರಯತ್ನಿಸುತ್ತಾನೆ. ಆದರೆ ಚೆಂಡನ್ನು ಹಿಡಿಯುವ ಮುನ್ನ ಆತ ಕಾಲು ಎಡವಿ ಕೆಳಗೆ ಬೀಳುತ್ತಾನೆ. ಆದರೂ ಚೆಂಡು ತನ್ನ ಬಳಿ ಬರುತ್ತಿದ್ದರಿಂದ ಮಲಗಿಕೊಂಡೆ ಚೆಂಡನ್ನು ಹಿಡಿಯಲು ಪ್ರಯತ್ನಿಸುತ್ತಾನೆ ಆದರೆ ಅದು ವಿಫಲವಾಗಿದೆ. 
ಆದರೆ ಅಭಿಮಾನಿಯ ಪ್ರಯತ್ನಕ್ಕೆ ಟ್ವೀಟರಿಗರು ಭೇಷ್ ಎಂದಿದ್ದಾರೆ. ಅಲ್ಲದೆ ರೀಟ್ವೀಟ್ ಗಳನ್ನು ಮಾಡಿ ಹೊಗಳುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com