ವಿಶ್ವಕಪ್‌ನಲ್ಲಿ ಆಫ್ಘಾನ್ ದಿಟ್ಟ ಪ್ರದರ್ಶನ: 3 ಮಾದರಿ ಕ್ರಿಕೆಟ್‌ಗೆ ರಶೀದ್ ಖಾನ್ ನಾಯಕ!

ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ತಂಡಗಳಿಗೆ ಪ್ರಬಲ ಸ್ಪರ್ಧೆ ನೀಡಿದ್ದ ಆಫ್ಘಾನಿಸ್ತಾನ ತಂಡ ಒಂದು ಪಂದ್ಯ ಗೆಲ್ಲದೆ ಟೂರ್ನಿಯಿಂದ ಹೊರಬಿದ್ದಿತ್ತು. ಇದೀಗ ತಂಡದ ನಾಯಕತ್ವವನ್ನು...
ರಶೀದ್ ಖಾನ್
ರಶೀದ್ ಖಾನ್
Updated on: 
ಆಫ್ಘಾನ್: ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ತಂಡಗಳಿಗೆ ಪ್ರಬಲ ಸ್ಪರ್ಧೆ ನೀಡಿದ್ದ ಆಫ್ಘಾನಿಸ್ತಾನ ತಂಡ ಒಂದು ಪಂದ್ಯ ಗೆಲ್ಲದೆ ಟೂರ್ನಿಯಿಂದ ಹೊರಬಿದ್ದಿತ್ತು. ಇದೀಗ ತಂಡದ ನಾಯಕತ್ವವನ್ನು ಬದಲಿಸಿರುವ ಆಫ್ಘಾನ್ ಕ್ರಿಕೆಟ್ ಮಂಡಳಿ ಅಸ್ಗರ್ ಬದಲಿಗೆ ರಶೀದ್ ಖಾನ್ ಗೆ ನಾಯಕ ಪಟ್ಟ ಕಟ್ಟಿದೆ. 
ಮೂರು ಮಾದರಿಗೂ ಅಸ್ಗರ್ ಆಫ್ಗಾನ್ ರನ್ನು ಕಿತ್ತು ಹಾಕಿದ ಬಳಿಕ ಗುಲಾಬ್ ನಬಿ(ಏಕದಿನ), ರಶೀದ್ ಖಾನ್(ಟಿ20) ಮತ್ತು ರೆಹಮತ್ ಶಾ(ಟೆಸ್ಟ್)ಗೆ ನಾಯಕರಾಗಿ ಆಯ್ಕೆ ಮಾಡಲಾಗಿತ್ತು. ಇದೀಗ ಎಲ್ಲರನ್ನು ನಾಯಕತ್ವದಿಂದ ವಜಾ ಮಾಡಲಾಗಿದ್ದು ಮೂರು ಮಾದರಿಗೂ ರಶೀದ್ ಖಾನ್ ರನ್ನು ನೇಮಕ ಮಾಡಲಾಗಿದೆ.
ಮಾಜಿ ನಾಯಕ ಅಸ್ಗರ್ ಆಫ್ಗಾನ್ ಉಪ ನಾಯಕನ ಜವಾಬ್ದಾರಿ ನಿಭಾಯಿಸಲಿದ್ದಾರೆ ಎಂದು ಎಸಿಬಿ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com