ವಾರ್ನರ್ ಶಾಟ್ ನಿಂದ ಭಾರತೀಯ ಮೂಲದ ನೆಟ್ ಬೌಲರ್ ಗೆ ಗಾಯ, ಆಸ್ಪತ್ರೆಗೆ ದಾಖಲು

2019ರ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಗೆಲ್ಲಲು ಭರ್ಜರಿ ಸಿದ್ಧತೆ ನಡೆಸಿರುವ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಅವರ...
ಡೇವಿಡ್ ವಾರ್ನರ್
ಡೇವಿಡ್ ವಾರ್ನರ್
Updated on: 
ಲಂಡನ್: 2019ರ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಗೆಲ್ಲಲು ಭರ್ಜರಿ ಸಿದ್ಧತೆ ನಡೆಸಿರುವ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಅವರ ಬ್ಯಾಟಿಂಗ್ ನಿಂದ ಭಾರತೀಯ ಮೂಲದ ನೆಟ್ ಬೌಲರ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾರ್ನರ್ ನೆಟ್ ಪ್ರಾಕ್ಟಿಸ್ ವೇಳೆ ಭಾರತೀಯ ಮೂಲದ ಬ್ರಿಟಿಷ್ ವೇಗಿ ಜೈ ಕಿಶನ್ ಅವರ ತಲೆಗೆ ಚೆಂಡು ಬಡಿದಿದ್ದು. ಸ್ಥಳದಲ್ಲೇ ಕುಸಿದುಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ನೆಟ್ ಬೌಲರ್ ಗಂಭೀರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ತಂಡ ಸದ್ಯಕ್ಕೆ ನೆಟ್ ಪ್ರಾಕ್ಟಿಸ್ ಅನ್ನು ಸ್ಥಗಿತಗೊಳಿಸಿದೆ. ಆಸಿಸ್ ತಂಡ ನಾಳೆ ಭಾರತದ ವಿರುದ್ಧ ಸೆಣಸಲಿದೆ.
ವಾರ್ನರ್ ಬ್ಯಾಟ್ ನಿಂದ ಸಿಡಿದ ಚೆಂಡು ನನ್ನ ತಲೆಗೆ ಬಡಿಯಿತು. ನನ್ನ ಹೆಸರು ಜೈ ಕಿಶನ್, ನಾನು ಒಬ್ಬ ಫಾಸ್ಟ್ ಬೌಲರ್ ಎಂದು ಕಿಶನ್ ಆಸ್ಪತ್ರೆಗೆ ದಾಖಲಿಸುವ ಮುನ್ನ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com