ಭಾರತ-ಆಫ್ಘನ್ ಕದನ: ಶನಿವಾರ ಕೊಹ್ಲಿಗೆ ಸಾಥ್ ನೀಡಲಿದ್ದಾರೆ ಪತ್ನಿ ಅನುಷ್ಕಾ ಶರ್ಮಾ

ಭಾರತ ಮತ್ತು ಆಫ್ಘಾನಿಸ್ತಾನ ತಂಡಗಳ ನಡುವಿನ ಶನಿವಾರದ ಪಂದ್ಯಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಸಾಕ್ಷಿಯಾಗಲಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಲಂಡನ್‌: ಭಾರತ ಮತ್ತು ಆಫ್ಘಾನಿಸ್ತಾನ ತಂಡಗಳ ನಡುವಿನ ಶನಿವಾರದ ಪಂದ್ಯಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಸಾಕ್ಷಿಯಾಗಲಿದ್ದಾರೆ.
ಶನಿವಾರ ಅಫ್ಘಾನಿಸ್ತಾನ ವಿರುದ್ಧದ ಐಸಿಸಿ ವಿಶ್ವಕಪ್‌ ಪಂದ್ಯದ ವೇಳೆಗೆ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಅವರು ತನ್ನ ಪತಿ ಹಾಗೂ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರ ಜತೆಯಾಗಲಿದ್ದಾರೆ. ಸೌಥ್ಯಾಂಪ್ಟನ್ ನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಕ್ಕೆ ಅನುಷ್ಕಾ ಹಾಜರಾಗಲಿದ್ದು, ತಮ್ಮ ಪತಿ ವಿರಾಟ್ ಕೊಹ್ಲಿ ಹಾಗೂ ಟೀಂ ಇಂಡಿಯಾವನ್ನು ಕ್ರೀಡಾಂಗಣದಲ್ಲಿ ಹುರಿದುಂಬಿಸಲಿದ್ದಾರೆ.
ಈ ವಾರದ ಆರಂಭದಲ್ಲಿ ವಿರುಷ್ಕಾ ದಂಪತಿಗಳು ಲಂಡನ್‌ನಲ್ಲಿ ಭೇಟಿಯಾಗಿರುವ ಫೋಟೊವೊಂದನ್ನು ಕೊಹ್ಲಿ ಅಭಿಮಾನಿಗಳ ಪೇಜ್‌ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಲಾಗಿತ್ತು. ಇದರ ಬೆನ್ನಲ್ಲೇ ಕಳೆದ ಮಂಗಳವಾರ "ಲಂಡನ್‌ನ ದಿ ಓಲ್ಡ್‌ ಬಾಂಡ್‌ ಸ್ಟ್ರೀಟ್‌ನಲ್ಲಿ ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ. ಐ ಲವ್‌ ಅನುಷ್ಕಾ ನೂತನ ಕೇಶವಿನ್ಯಾಸ" ಎಂಬ ಶೀರ್ಷಿಕೆಯೊಂದಿಗೆ ಅವರ ಜತೆಯಲ್ಲಿರುವ ಫೋಟೊವನ್ನು ಇನ್‌ ಸ್ಟಾಗ್ರಾಂನಲ್ಲಿ ಶೇರ್‌ ಮಾಡಲಾಗಿತ್ತು.
ಬಳಿಕ ಅನುಷ್ಕಾ, ರೋಹಿತ್ ಕುಟುಂಬದ ಜೊತೆಗಿರುವ ಫೋಟೋವನ್ನು ಶಿಖರ್ ಧವನ್ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದರು. 
ಇನ್ನು ಮಹತ್ವದ ವಿಶ್ವಕಪ್ ಟೂರ್ನಿಯ ನಿಮಿತ್ತ ಟೂರ್ನಿ ಆರಂಭವಾದ ಮೊದಲ 20 ದಿನ ಆಟಗಾರರು ತಮ್ಮ ಪತ್ನಿಯರೊಂದಿಗೆ ಪ್ರಯಾಣ ಮಾಡುವಂತಿಲ್ಲ ಎಂದು ಬಿಸಿಸಿಐ ಸೂಚಿಸಿತ್ತು. ಇದೀಗ ಬಿಸಿಸಿಐ ವಿಧಿಸಿದ್ದ 20 ದಿನಗಳ ಅವಧಿ ಕಳೆದಿದ್ದು, ಕ್ರಿಕೆಟಿಗರ ಪತ್ನಿಯರು ಲಂಡನ್ ನತ್ತ ಮುಖ ಮಾಡಿದ್ದಾರೆ. ಈಗಾಗಲೇ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇವ್, ಶಿಖರ್ ಧವನ್ ಪತ್ನಿ ಆಯೇಷಾ ಮುಖರ್ಜಿ ಲಂಡನ್ ನಲ್ಲಿ ಮೊಕ್ಕಾಂ ಹೂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com